Poonam Pandey death: ಮಾದಕ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ವಿಧಿವಶರಾಗಿದ್ದಾರೆ

ರೂಪದರ್ಶಿ ಹಾಗೂ ನಟಿಯಾಗಿ ಹೆಸರು ಮಾಡಿದ್ದ ಪೂನಂ ಪಾಂಡೆ ವದಂತಿಗಳ ನಡುವೆಯೇ ನಿಧನರಾದರು. ಇಷ್ಕ್ ಈಸ್ ಜೆಹಾರ್ ನ ಕನ್ನಡ ಆವೃತ್ತಿ ಸೇರಿದಂತೆ ಆರು ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಪೂನಂ ಪಾಂಡೆ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಭಾರತೀಯ ಉದ್ಯಮವು ಆಘಾತಕ್ಕೊಳಗಾಗಿದೆ.

ಪೂನಂ ಪಾಂಡೆ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅವರ ಅಭಿಮಾನಿಗಳು. ಪೂನಂ ಪಾಂಡೆ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಅವರ ನಿಧನವನ್ನು ಪ್ರಕಟಿಸಿದೆ. ಅವರ ತಂಡವೇ ಈ ಮಾಹಿತಿ ನೀಡಿದೆ ಎನ್ನಲಾಗಿದೆ.

ಬೇರೆಯವರು ಸುದ್ದಿ ಹಬ್ಬಿಸಿದ್ದರೆ ಯಾರೂ ಅಷ್ಟು ಸುಲಭವಾಗಿ ನಂಬುತ್ತಿರಲಿಲ್ಲ. ಈ ಕ್ಷಣದಲ್ಲಿಯೂ ಅನೇಕರು ನಂಬಲು ಸಿದ್ಧರಿಲ್ಲ. ಇದು ಪ್ರಚಾರದ ಸ್ಟಂಟ್ ಕೂಡ ಆಗಿರಬಹುದು ಎಂದು ಕೆಲವರು ಅನುಮಾನಿಸುತ್ತಾರೆ. ಪೂನಂ ಪಾಂಡೆ ಅವರ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ ಎಂದು ನಂಬಲಾಗಿದೆ.

ಆದರೆ, ಪೂನಂ ಪಾಂಡೆ ಸಾವಿನ ಸುದ್ದಿಯನ್ನು ಪೂನಂ ಪಾಂಡೆ ಮ್ಯಾನೇಜರ್ ಖಚಿತಪಡಿಸಿದ್ದಾರೆ. ಇದೇ ಕಾರಣಕ್ಕೆ ಪೂನಂ ಪಾಂಡೆ ಸಾವಿಗೆ ಬಾಲಿವುಡ್ ಮಂದಿ ಸಂತಾಪ ಸೂಚಿಸಿದ್ದಾರೆ.

ಪೂನಂ ಪಾಂಡೆ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಪೂನಂ ಪಾಂಡೆ ತಂಡದ ಸದಸ್ಯರು ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಪೂನಂ ಪಾಂಡೆ ಕೊನೆಯುಸಿರೆಳೆದಿದ್ದು, ಅಂತ್ಯಕ್ರಿಯೆಯ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಪೂನಂ ಪಾಂಡೆ ಮ್ಯಾನೇಜರ್ ಹೇಳಿದ್ದಾರೆ.

 

Leave a Reply

Your email address will not be published. Required fields are marked *