ಈ ವ್ಯಕ್ತಿನಾ ಅದೆಷ್ಟು ಅಪಮಾನಿಸಿದರು ಗೊತ್ತಾ?

ಈ ವ್ಯಕ್ತಿನಾ ಅದೆಷ್ಟು ಅಪಮಾನಿಸಿದರು ಗೊತ್ತಾ? ಅದೆಷ್ಟು ಕೆಟ್ಟಾಕೊಳಕು ಭಾಷೆಯಲ್ಲಿ ನಿಂಧಿಸಿದರು ಗೊತ್ತಾ? ತಾಯಿ, ಹೆಂಡತಿ, ಬಟ್ಟೆ, ಕನ್ನಡಕ, ನಡೆ, ನುಡಿ, ಪ್ರವಾಸ ಎಲ್ಲದರ ಬಗ್ಗೆ ತೀರ ಅಸಹ್ಯಕರವಾಗಿ ಮಾತಾಡಿಬಿಟ್ಟದ್ದರು, ಮಾತಾಡುತ್ತಿರುವರು. ಹೆಜ್ಜೆ-ಹೆಜ್ಜೆಗೂ ಅದೆಷ್ಟು ಕಿರುಕುಳ ಕೊಟ್ಟರು! ಅದೆಷ್ಟು ನೋವು! ಗುಂಪುಗೂಡಿಯೇ ಎಲ್ಲಾ ದಿಕ್ಕಿನಿಂದಲೂ ಮುಗಿಬಿದ್ದರು…! ದಿನಬೆಳಗಾದರೇ ಅದನ್ನೇ ಕಾಯಕ ಮಾಡಿಕೊಂಡಿದ್ದರು ಹಲವರು..!

ಒಬ್ಬ ಸಾಮಾನ್ಯ ಮನುಷ್ಯ ಹೆದರೋರು ಅಂತಹ ಅಪಕೀರ್ತಿಗಳಿಗೆ, ಅಪಮಾನಗಳಿಗೆ. ಆದ್ರೆ ಈ ವ್ಯಕ್ತಿಯಲ್ಲಿ ಅದೆಂತಹ ಪ್ರಚಂಡ ಆತ್ಮಶಕ್ತಿ ಇತ್ತು, ಆ ಅಪಮಾನ, ನಿಂಧನೆಗಳೆಲ್ಲದರ ಅರಿವು ಆತನಿಗಿತ್ತು. ಅದೇನು ಅಚಲ ಆತ್ಮವಿಶ್ವಾಸ ಇತ್ತು, ಅದೇನು ಶಕ್ತಿ ಅದೆಲ್ಲವನ್ನು ಮೆಟ್ಟಿ ಕೆಲಸ ಮಾಡಿ, ನಿಂಧಕರಿಗಿಂತ ಸಹಸ್ರಪಟ್ಟು ಅಭಿಮಾನಿಗಳನ್ನ ಸಂಪಾದಿಸುವಂತೆ ಮಾಡಿತು. ಜೊತೆಗೆ ನಿಂಧಿಸಿದವರನ್ನ, ಅಪಮಾನಿಸಿದವರನ್ನ ಶಿಕ್ಷಿಸುವ ಮಟ್ಟಕ್ಕೆ ಅಧಿಕಾರ-ಶಕ್ತಿ ಎಲ್ಲವನ್ನು ಪಡೆದ ಮೇಲೂ ಈ ವ್ಯಕ್ತಿಯಲ್ಲಿ ಸಣ್ಣ ಪ್ರತೀಕಾರದ ಕಿಡಿಯೂ ಕಾಣಲಿಲ್ಲವಲ್ಲಾ. ಕ್ಷಮಿಸಿ-ಸಣ್ಣ ನಗೆ ಬೀರಿ ತಾನು ಮಾಡಬೇಕಾದ ಕಾರ್ಯದಲ್ಲಿ ಮುಂದಡಿ ಇಟ್ಟರಲ್ಲಾ, ಅದಾವ ಶಕ್ತಿ ಆ ಮನಸ್ಥಿತಿ ನೀಡಿತು, ಅದಾವ ವ್ಯಕ್ತಿಗೆ ಇದು ಸಾಧ್ಯವಾದೀತು..!

ಇದರಲ್ಲಿ ಒಂದೇ ಒಂದು % ಆ ಆತ್ಮಶಕ್ತಿ ಕೊಡು ನರೋತ್ತಮೇಂದ್ರ, ನಿನ್ನಂತೆ ನರರಲ್ಲಿ ಉತ್ತಮನಾಗಿ ಇಂದ್ರನಾಗಬೇಕಿದೆ..!

Leave a Reply

Your email address will not be published. Required fields are marked *