ವಿಜಯೇಂದ್ರ ಏನಾದ್ರೂ ಮಾತಾಡಲಿ, ಅವರಿಗೆ ದೇವರು ಒಳ್ಳೆಯದನ್ನೇ ಮಾಡಲಿ: ಸೋಮಣ್ಣ

ಬೆಂಗಳೂರು: ಬಿ.ವೈ ವಿಜಯೇಂದ್ರ (B.Y.Vijayendra) ಏನಾದರೂ ಮಾತಾಡಲಿ ಅವರಿಗೆ ದೇವರು ಒಳ್ಳೆಯದನ್ನೇ ಮಾಡಲಿ ಎಂದು ಸಚಿವ ಸೋಮಣ್ಣ (V.Somanna)ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ (B.S.Yediyurappa) ನಮ್ಮೆಲ್ಲರಿಗೂ ನಾಯಕರು. ಕೇವಲ ವಿಜಯೇಂದ್ರ ಒಬ್ಬರಿಗೆ ಅವರು ನಾಯಕರಲ್ಲ. ವಿಜಯೇಂದ್ರ ಏನು ಹೇಳಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಕಾಂಗ್ರೆಸ್‍ಗೆ (Congress) ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಪಕ್ಷ ತೊರೆಯುವ ಅವಶ್ಯಕತೆ ನನಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಿದ್ದುಗೆ ರಾಜಕೀಯ ಭವಿಷ್ಯ ನುಡಿದ ಮನೆ ದೇವರು- ಒಂದೇ ಕಡೆ ನಿಂತ್ರೆ ಬಲವಿಲ್ಲ; ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು

ಯಡಿಯೂರಪ್ಪರ ಹೋರಾಟ ಬೇರೆ. ನನ್ನ ಹೋರಾಟ ಬೇರೆ. ಆದರೆ ವಿಜಯೇಂದ್ರ ಅವರ ಬೆಳವಣಿಗೆಗೆ ಅವರು ಏನು ಮಾಡುತ್ತಾರೆ ಎಂಬುದನ್ನು ಹೇಳಿಕೊಂಡರೆ ಉತ್ತಮ. ನನಗೆ 72 ವರ್ಷ, ವಿಜಯೇಂದ್ರ ಅವರಿಗಿಂತ ದೊಡ್ಡ ಮಗ ಇದ್ದಾನೆ ಎಂದು ನಾನು ಹೇಳಿದ್ದೆ. ಯಡಿಯೂರಪ್ಪ ಹೆಸರು ಬಿಟ್ಟು ತಮ್ಮ ದೂರ ದೃಷ್ಟಿ ಏನು ಎಂದು ವಿಜಯೇಂದ್ರ ಬಹಿರಂಗಪಡಿಸಲಿ ಎಂದಿದ್ದಾರೆ.

ಪಕ್ಷದ ವರಿಷ್ಠರೊಂದಿಗೆ ಮಾತಾಡಿದ್ದೇನೆ. ಎಲ್ಲಾ ಗೊಂದಲಗಳು ಬಗೆಹರಿದಿವೆ. ನಮ್ಮೊಳಗಿನ ಆಂತರಿಕ ಕಲಹಗಳಿಗೆ ತೆರೆ ಎಳೆದು ಪಕ್ಷ ಕಟ್ಟುವಂತೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ

Leave a Reply

Your email address will not be published. Required fields are marked *