ಇನ್ನೇನು ಐಪಿಎಲ್ ಶುರುವಾಗುವ ಸಮಯದಲ್ಲೇ ಆರ್‌ಸಿಬಿಗೆ ಬಿಗ್ ಶಾಕ್

ಇಂಡಿಯನ್ ಪ್ರೀಮಿಯರ್ ಲೀಗ್‌ನ 16 ನೇ ಸೀಸನ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಆಸೀಸ್ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯದಿಂದ ಚೇತರಿಸಿಕೊಂಡಿದ್ದು ಆರ್​ಸಿಬಿಗೆ ಕೊಂಚ ನಿರಾಳ ತಂದಿತ್ತು. ಆದರೆ ಇದೀಗ ಜೋಶ್ ಹ್ಯಾಜಲ್‌ವುಡ್ ಗಾಯಕೊಂಡಿರುವುದು ಆರ್​ಸಿಬಿ ಬಳಗದ ತಲೆನೋವು ಹೆಚ್ಚಿಸಿದೆ. ಜೋಶ್ ಹ್ಯಾಜಲ್‌ವುಡ್ ಈಗಾಗಲೇ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಇಂಜುರಿಯಿಂದಾಗಿ ಹ್ಯಾಜಲ್‌ವುಡ್ ಐಪಿಎಲ್‌ನಲ್ಲಿ ಕೆಲವು ಪಂದ್ಯಗಳನ್ನು ಆಡದಿರುವ ಸಾಧ್ಯತೆಗಳಿವೆ..

ಈಗಾಗಲೇ ಜೋಶ್ ಹ್ಯಾಜಲ್‌ವುಡ್ ಭಾರತ ವಿರುದ್ಧದ ಉಳಿದ ಎರಡು ಟೆಸ್ಟ್‌ಗಳಿಂದ ಹೊರಗುಳಿಯಲಿದ್ದಾರೆ. ಚಿಕಿತ್ಸೆಗಾಗಿ ಮನೆಗೆ ಮರಳಿದ್ದಾರೆ. ಆರ್‌ಸಿಬಿಯ ಮೊದಲ ಪಂದ್ಯ ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದ್ದು, ಈ ಪಂದ್ಯದಲ್ಲಿ ಹ್ಯಾಜಲ್‌ವುಡ್ ಆಡುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮಾರ್ಚ್ 17 ರಿಂದ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ಆರಂಭವಾಗಲಿದ್ದು, ಆ ಸರಣಿಗೂ ಹ್ಯಾಜಲ್​ವುಡ್ ಅಲಭ್ಯರಾಗಿದ್ದಾರೆ. ಇದು ಕೂಡ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಹೊಡೆತವಾಗಿದೆ.

ನಿಮ್ಮ ಮೊಬೈಲ್ ನಲ್ಲಿ ಐಪಿಎಲ್ ಮ್ಯಾಚ್ ನೋಡಲು ಆಗುತ್ತಿಲ್ಲವೆ ಹಾಗಾದರೆ ನಿಮಗೊಂದು ಗುಡ್ ನ್ಯೂಸ್

ಈ ನಡುವೆ ಆರ್‌ಸಿಬಿಗೆ ಸಂತಸದ ಸುದ್ದಿ ಸಿಕ್ಕಿದ್ದು, ಭಾರತ ವಿರುದ್ಧದ ಏಕದಿನ ಸರಣಿಗೆ ಆಸೀಸ್ ತಂಡಕ್ಕೆ ಮ್ಯಾಕ್ಸ್​ವೆಲ್ ಆಯ್ಕೆಯಾಗಿದ್ದಾರೆ. ಈ ಮೂರು ಏಕದಿನ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ಫಿಟ್ ಆಗಿರುವುದು ಸಾಭೀತಾದರೆ, ಅವರು ಐಪಿಎಲ್‌ನ ಪೂರ್ಣ ಸೀಸನ್​ ಆಡುವುದು ಖಚಿತ.16ನೇ ಸೀಸನ್ ಮಾರ್ಚ್ 31ರಿಂದ ಆರಂಭವಾಗಲಿದ್ದು, ಆರ್​ಸಿಬಿ ತನ್ನ ಆರಂಭಿಕ ಪಂದ್ಯವನ್ನು ಮುಂಬೈ ವಿರುದ್ಧ ಆಡಲಿದೆ. ಪಂದ್ಯ ಏಪ್ರಿಲ್ 2 ರಂದು, ರಾತ್ರಿ 7:30 ಕ್ಕೆ ಆರಂಭವಾಗಲಿದೆ.

Leave a Reply

Your email address will not be published. Required fields are marked *