ಐಫೋನ್​ ಮತ್ತು ಆಂಡ್ರಾಯ್ಡ್ನಲ್ಲಿ ವಾಟ್ಸ್​ಆ್ಯಪ್ ಡಿಸಪಿಯರಿಂಗ್ ಮೆಸೇಜ್ ಸಕ್ರಿಯಗೊಳಿಸುವುದು ಹೇಗೆ?

ಕಳೆದ ವರ್ಷ ವಾಟ್ಸ್​ಆ್ಯಪ್​​ ಕಣ್ಮರೆಯಾಗುವ ಸಂದೇಶ ಅಂದರೆ ಡಿಸಪಿಯರಿಂಗ್ (Disappearing ) ಮೆಸೇಜ್ ಫೀಚರ್ ಪರಿಚಯಿಸಿತ್ತು. ಈ ಫೀಚರ್‌ಅನ್ನು ಆನ್‌ ಮಾಡಿದಾಗ ನಾವು ಇತರರಿಗೆ ಕಳುಹಿಸಿದ ಅಥವಾ ಇತರರಿಂದ ಪಡೆದ ಮೇಸೆಜ್‌ಗಳು ನಿರ್ದಿಷ್ಟ ಅವಧಿ ನಂತರ ಚಾಟ್‌ನಿಂದ ಅಟೋಮೆಟಿಕ್ ಆಗಿ ಡಿಲೀಟ್ ಆಗುತ್ತವೆ.

ವಿಶ್ವದಲ್ಲಿ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ವಿನೂತನ ಫೀಚರ್​ಗಳನ್ನು ಪರಿಚಯಿಸುತ್ತಲೇ ಇದೆ. ಈ ವರ್ಷವಂತು ಅತಿ ಹೆಚ್ಚು ಅಪ್ಡೇಟ್​ಗಳನ್ನು ನೀಡಿರುವ ವಾಟ್ಸ್​ಆ್ಯಪ್ ​ನಲ್ಲಿ ಇನ್ನೂ ಅನೇಕ ಆಯ್ಕೆಗಳು ಬರುವುದರಲ್ಲಿದೆ. ಕಳೆದ ವರ್ಷ ವಾಟ್ಸ್​ಆ್ಯಪ್​​ ಕಣ್ಮರೆಯಾಗುವ ಸಂದೇಶ ಅಂದರೆ ಡಿಸಪಿಯರಿಂಗ್ (Disappearing ) ಮೆಸೇಜ್ ಫೀಚರ್ ಪರಿಚಯಿಸಿತ್ತು. ಈ ಫೀಚರ್‌ಅನ್ನು ಆನ್‌ ಮಾಡಿದಾಗ ನಾವು ಇತರರಿಗೆ ಕಳುಹಿಸಿದ ಅಥವಾ ಇತರರಿಂದ ಪಡೆದ ಮೇಸೆಜ್‌ಗಳು ನಿರ್ದಿಷ್ಟ ಅವಧಿ ನಂತರ ಚಾಟ್‌ನಿಂದ ಅಟೋಮೆಟಿಕ್ ಆಗಿ ಡಿಲೀಟ್ ಆಗುತ್ತವೆ. ಹೀಗೆ ಸಂದೇಶಗಳನ್ನು ಕಣ್ಮರೆಯಾಗಿಸಲು 90 ದಿನಗಳವರೆಗೆ ಅವಕಾಶವಿದೆ. ಹಾಗಾದರೆ ಆಂಡ್ರಾಯ್ಡ್ ಮತ್ತು ಐಫೋನ್ (iPhone)​ನಲ್ಲಿ ವಾಟ್ಸ್​ಆ್ಯಪ್ ಡಿಸಪಿಯರಿಂಗ್ ಮೆಸೇಜ್ ಸಕ್ರಿಯಗೊಳಿಸುವುದು ಹೇಗೆ?.

ಆಂಡ್ರಾಯ್ಡ್​ನಲ್ಲಿ ಕಣ್ಮರೆಯಾಗುವ ಸಂದೇಶಗಳನ್ನು ಸಕ್ರಿಯಗೊಳಿಸುವುದು ಹೇಗೆ?

  • ವಾಟ್ಸ್​ಆ್ಯಪ್ ತೆರೆಯಿರಿ.
  • ಕಾಂಟ್ಯಾಕ್ಟ್ ಹೆಸರನ್ನು ಟ್ಯಾಪ್ ಮಾಡಿ.
  • ಡಿಸಪಿಯರಿಂಗ್‌ ಮೇಸೆಜ್ ಟ್ಯಾಪ್ ಮಾಡಿ. ಪ್ರಾಂಪ್ಟ್ (Prompt) ಮಾಡಿದರೆ, ‘Continue’ ಟ್ಯಾಪ್ ಮಾಡಿ.
  • 24 ಗಂಟೆಗಳು, 7 ದಿನಗಳು ಅಥವಾ 90 ದಿನಗಳನ್ನು ಆಯ್ಕೆಮಾಡಿ.

ಐಫೋನ್​​ನಲ್ಲಿ ಕಣ್ಮರೆಯಾಗುವ ಸಂದೇಶಗಳನ್ನು ಸಕ್ರಿಯಗೊಳಿಸುವುದು ಹೇಗೆ?

  • ವಾಟ್ಸ್​ಆ್ಯಪ್ ತೆರೆಯಿರಿ.
  • ಕಾಂಟ್ಯಾಕ್ಟ್ ಹೆಸರನ್ನು ಟ್ಯಾಪ್ ಮಾಡಿ.
  • ಡಿಸಪಿಯರಿಂಗ್‌ ಮೇಸೆಜ್ ಟ್ಯಾಪ್ ಮಾಡಿ. ಪ್ರಾಂಪ್ಟ್ (Prompt) ಮಾಡಿದರೆ, ‘Continue’ ಟ್ಯಾಪ್ ಮಾಡಿ.
  • 24 ಗಂಟೆಗಳು, 7 ದಿನಗಳು ಅಥವಾ 90 ದಿನಗಳನ್ನು ಆಯ್ಕೆಮಾಡಿ.

ನಿಮ್ಮ ಎಲ್ಲಾ ಹೊಸ ಚಾಟ್‌ಗಳಿಗೆ ಕಣ್ಮರೆಯಾಗುವ ಫಿಚರ್ ಅನ್ನು ಆನ್ ಮಾಡಿದ ನಂತರ ಈ ಬಗ್ಗೆ ಆನ್ ಮಾಡಲಾಗಿದೆ ಎಂಬ ಅಧಿಸೂಚನೆಯು ಚಾಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಕಣ್ಮರೆಯಾಗುವ ಮೆಸೇಜ್ ಗಳನ್ನು ಪೂರ್ವನಿಯೋಜಿತವಾಗಿ ಆನ್ ಮಾಡಲಾಗಿದೆ ಎಂದು ಅಧಿಸೂಚನೆಯು ತಿಳಿಸುತ್ತದೆ. ಆದ್ದರಿಂದ ನೀವು ನಿರ್ದಿಷ್ಟವಾಗಿ ಆ ಫೀಚರ್ ಅನ್ನು ಬಳಸಿದ್ದೀರಿ ಎಂದು ತಿಳಿಸಲಾಗುತ್ತದೆ.

ಡೀಫಾಲ್ಟ್ ಆಗಿ ಕಣ್ಮರೆಯಾಗುವ ಸಂದೇಶಗಳ ಫಿಚರ್ ಆನ್ ಮಾಡಲು ಬಯಸುವ ಜನರಿಗೆ, ವಾಟ್ಸ್​ಆ್ಯಪ್ ಇತರ ವ್ಯಕ್ತಿಯು ಆಯ್ಕೆ ಮಾಡಿದ ಡೀಫಾಲ್ಟ್ ಎಂದು ಜನರಿಗೆ ಹೇಳುವ ಸಂದೇಶವನ್ನು ಅವರ ಚಾಟ್‌ಗಳಲ್ಲಿ ಪ್ರದರ್ಶಿಸುತ್ತದೆ. ಇದು ವಾಟ್ಸ್​ಆ್ಯಪ್​​ನಲ್ಲಿ ಪ್ರತಿಯೊಬ್ಬರೊಂದಿಗೂ ನೀವು ಹೇಗೆ ಸಂವಹನ ನಡೆಸಬೇಕು ಎಂಬುದರ ಕುರಿತು ನೀವು ಮಾಡಿದ ಆಯ್ಕೆಯಾಗಿರಲಿದೆ.

 

ವಾಟ್ಸಪ್‌ ನ ಹೊಸ ಫಿಚರ್ ಬಗ್ಗೆ ಗೊತ್ತಾ ಇನ್ಮುಂದೆ ಸ್ಕ್ರೀನ್ ಶಟ್ ತೆಗಿಯೋಹಾಗಿಲ್ಲ

 

Leave a Reply

Your email address will not be published. Required fields are marked *