ಜಿಯೋ ಭರ್ಜರಿ ಆಫರ್ : ವರ್ಷಪೂರ್ತಿ ನಿತ್ಯ 2.5GB ಡೇಟಾ , ಅನ್ಲಿಮಿಟೆಡ್ ಕಾಲಿಂಗ್ .!

Jio independence day 2022 Offer : ರಿಲಯನ್ಸ್ ಜಿಯೋ ಸ್ವಾತಂತ್ರ್ಯ ದಿನದ ಕೊಡುಗೆಯನ್ನು ಘೋಷಿಸಿದೆ. Jio ತನ್ನ ಅತ್ಯಂತ ಜನಪ್ರಿಯ ದೀರ್ಘಾವಧಿಯ ಪ್ರಿಪೇಯ್ಡ್ ಯೋಜನೆಗಳಲ್ಲಿ ಒಂದನ್ನು ಹೆಚ್ಚುವರಿ ಪ್ರಯೋಜನಗಳೊಂದಿಗೆ ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಗ್ರಾಹಕರಿಗೆ 2,250 ರೂಪಾಯಿ ಮೌಲ್ಯದ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಿದೆ. Jio ಇದೀಗ ಈ ಆಫರ್ ಅನ್ನು ಘೋಷಿಸಿದ್ದು, ಈ ಆಫರ್ ಎಲ್ಲಯವರೆಗೆ ಲಭ್ಯವಿರಲಿದೆ ಎನ್ನುವ ಮಾಹಿತಿ ಮಾತ್ರ ನೀಡಿಲ್ಲ.

ರಿಲಯನ್ಸ್ ಜಿಯೋ 2022 ರ ಸ್ವಾತಂತ್ರ್ಯ ದಿನದ ಕೊಡುಗೆ :

75ರ ಸ್ವಾತಂತ್ರ್ಯ ದಿನದ ಕೊಡುಗೆಯನ್ನು 2999  ರೂಪಾಯಿ ಪ್ರಿಪೇಯ್ಡ್ ಯೋಜನೆಯೊಂದಿಗೆ ಪ್ರಸ್ತುತಪಡಿಸುತ್ತದೆ. ಈ ಯೋಜನೆಯೊಂದಿಗೆ, ಬಳಕೆದಾರರು 365 ದಿನಗಳವರೆಗೆ ದಿನಕ್ಕೆ 2.5GB ಡೇಟಾವನ್ನು ಪಡೆಯಲಿದ್ದಾರೆ. ಇದು ಧ್ವನಿ ಕರೆ ಮತ್ತು SMS ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ಈ ಯೋಜನೆಯೊಂದಿಗೆ, ಬಳಕೆದಾರರು ಅನಿಯಮಿತ ಧ್ವನಿ ಕರೆ ಮತ್ತು ಪ್ರತಿ ದಿನ 100 SMS ಪಡೆಯುತ್ತಾರೆ.

ರಿಲಯನ್ಸ್ ಜಿಯೋ ಸ್ವಾತಂತ್ರ್ಯ ದಿನದ  ಆಫರ್ ನಲ್ಲಿ ಏನಿರಲಿದೆ ?   :
ಯೋಜನೆಗಳ ಹೆಚ್ಚುವರಿ ಪ್ರಯೋಜನಗಳೆಂದರೆ JioTV, JioCinema, JioSecurity, JioCloud ಮತ್ತು Disney+ Hotstar ಮೊಬೈಲ್ ಚಂದಾದಾರಿಕೆಯನ್ನು ಒಂದು ವರ್ಷಕ್ಕೆ ಉಚಿತವಾಗಿ ಪಡೆಯಬಹುದು.

ಜಿಯೋ ಸ್ವಾತಂತ್ರ್ಯ ದಿನದ ಕೊಡುಗೆ ಏನು?
Jio ನ ಸ್ವಾತಂತ್ರ್ಯ ದಿನದ 2022 ಆಫರ್ ಅಡಿಯಲ್ಲಿ, ಬಳಕೆದಾರರು ಈ ಯೋಜನೆಯೊಂದಿಗೆ 75GB ಹೆಚ್ಚುವರಿ ಡೇಟಾವನ್ನು ಪಡೆಯುತ್ತಾರೆ.  2,250 ರೂಪಾಯಿ ಮೌಲ್ಯದ ಇತರ ಪ್ರಯೋಜನಗಳು ಕೂಡಾ ಲಭ್ಯವಿರಲಿವೆ.

Leave a Reply

Your email address will not be published. Required fields are marked *