ಚಿನ್ನಾಭರಣ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್

ಹೊಸದಿಲ್ಲಿ: ಚಿನ್ನ ಹೆಣ್ಮಕ್ಕಳ ನೆಚ್ಚಿನ ಆಭರಣ. ಚಿನ್ನ ಖರೀದಿಸುವವರು ಮಾತ್ರವಲ್ಲ ಎಲ್ಲರಿಗೂ ಕೂಡ ದಿನದ ಚಿನ್ನದ ಧಾರಣೆ ಎಷ್ಟಿದೆ ಎನ್ನುವ ತಿಳಿಯುವ ಕುತೂಹಲ ಇದ್ದೇ ಇರುತ್ತದೆ. ವರಮಹಾಲಕ್ಷ್ಮೀ ಹಬ್ಬದ ದಿನ ಏರಿದ್ದ ಚಿನ್ನದ ಬೆಲೆ ಬಳಿಕ ಇಳಿಮುಖದತ್ತ ಸಾಗಿತ್ತು. ಇದೀಗ ಚಿನ್ನಾಭರಣ ಪ್ರಿಯರಿಗೆ ಮತ್ತೆ ಶುಭಸುದ್ದಿ ದೊರಕಿದೆ. ದೇಶದಲ್ಲಿ ಇಂದು ಗುರುವಾರದಂದು ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಂಡಿದ್ದು, ಚಿನ್ನಾಭರಣ ಪ್ರಿಯರ ಮೊಗದಲ್ಲಿ ಸಂತಸ ಅರಳಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿಯ ದರ ಹೇಗಿದೆ ಅನ್ನೋದನ್ನು ಆಭರಣ ಪ್ರಿಯರಿಗಾಗಿ ಇಲ್ಲಿ ಕೊಡಲಾಗಿದೆ.

(Gold Rate Today) ಇಂದು ಆಗಸ್ಟ್ 11, ಗುರುವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹ 5,165 ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ ₹ 5,171 ನಿಗದಿಯಾಗಿದೆ.

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹ 47,400 ನಿಗದಿಯಾಗಿದ್ದು, ಇಳಿಮುಖವಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 51,710 ರೂಪಾಯಿ ದಾಖಲಾಗಿದೆ.

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ:

ಬೆಂಗಳೂರು: ₹ 47,400 (22 ಕ್ಯಾರಟ್‌) – ₹ 51,710 (24 ಕ್ಯಾರಟ್‌)
ಚೆನ್ನೈ: ₹ 48,930 (22 ಕ್ಯಾರಟ್‌) – ₹ 53,380 (24 ಕ್ಯಾರಟ್‌)
ದಿಲ್ಲಿ: ₹ 47,550 (22 ಕ್ಯಾರಟ್‌) – ₹ 51,870 (24 ಕ್ಯಾರಟ್‌)
ಹೈದರಾಬಾದ್‌: ₹47,350 (22 ಕ್ಯಾರಟ್‌) – ₹51,650 (24 ಕ್ಯಾರಟ್‌)
ಕೋಲ್ಕತಾ: ₹47,350 (22 ಕ್ಯಾರಟ್‌) – ₹51,650 (24 ಕ್ಯಾರಟ್‌)
ಮಂಗಳೂರು: ₹47,400 (22 ಕ್ಯಾರಟ್‌) – ₹51,710 (24 ಕ್ಯಾರಟ್‌)

ಮುಂಬಯಿ: ₹47,350 (22 ಕ್ಯಾರಟ್‌) – ₹51,650 (24 ಕ್ಯಾರಟ್‌)
ಮೈಸೂರು: ₹47,400 (22 ಕ್ಯಾರಟ್‌) – ₹51,710 (24 ಕ್ಯಾರಟ್‌)

ಬೆಳ್ಳಿ ದರ (Silver Rate)

ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ ₹ 58,700 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹64,200 ಇದೆ. ದೇಶಾದ್ಯಂತ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದರೆ ಇನ್ನೂ ಕೆಲವು ನಗರಗಳಲ್ಲಿ ಇಳಿಕೆ ಕಂಡುಬಂದಿದೆ. ಚೆನ್ನೈ, ಕೇರಳ, ವಿಜಯವಾಡ, ಮಂಗಳೂರು, ಮೈಸೂರು, ವಿಶಾಖಪಟ್ಟಣಂ, ಕೊಯಂಬತ್ತೂರಿನಲ್ಲಿಯೂ ₹64,200 ನಿಗದಿಯಾಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಹಾಗೂ ಬೆಳ್ಳಿ ಬೆಲೆಯಲ್ಲಿ ತಟಸ್ಥತೆ ಕಂಡುಬಂದಿದೆ. ಎಂದಿನಂತೆ ಬೆಳಗ್ಗೆ ಹನ್ನೊಂದು ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.

ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ನಿಮ್ಮ ನಗರಗಳಲ್ಲಿ ಇಂದಿನ ದಿನ ಚಿನ್ನ ಮತ್ತು ಬೆಳ್ಳಿಗೆ ಎಷ್ಟು ದರ ಇವೆ ಅನ್ನೋದನ್ನು ಇಲ್ಲಿ ನೀವು ಪ್ರತಿ ದಿನ ತಿಳಿದುಕೊಳ್ಳಬಹುದು.

Leave a Reply

Your email address will not be published. Required fields are marked *