ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಇಂದು ರಾಜ್ಯಸಭೆಯಲ್ಲಿ ಬೀಳ್ಕೊಡುಗೆ ನಮಗೆಲ್ಲ ಇದು ಭಾವುಕ ಕ್ಷಣ-ಮೋದಿ

ನವದೆಹಲಿ: ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಇಂದು ರಾಜ್ಯಸಭೆಯಲ್ಲಿ ಬೀಳ್ಕೊಡುಗೆ ನೀಡಲಾಗಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ನಾಯಕರು ಭಾಗವಹಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವೆಂಕಯ್ಯ ನಾಯ್ಡು ಅವರಿಗೆ ಭಾರತೀಯ ಭಾಷೆಗಳ ಬಗ್ಗೆ ಒಲವಿದೆ. ಅವರು ಸದನದ ಅಧ್ಯಕ್ಷತೆಯನ್ನು ಹೇಗೆ ವಹಿಸಿದರು ಎಂಬುದರಲ್ಲಿಯೇ ಇದು ಗೊತ್ತಾಗುತ್ತದೆ. ರಾಜ್ಯಸಭೆಯ ಉತ್ಪಾದಕತೆಯನ್ನು ಹೆಚ್ಚಿಸಲು ಅವರು ಬಹಳ ಕೊಡುಗೆ ನೀಡಿದ್ದಾರೆ. ವೆಂಕಯ್ಯ ನಾಯ್ಡು ಅವರ ಭಾಷೆಗಳ ಮೇಲೆ ಅವರ ಹಿಡಿತ ಬಹಳ ಉತ್ತಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನಾನು ವೆಂಕಯ್ಯ ನಾಯ್ಡು ಅವರ ಜೊತೆ ಬಹಳ ಸಮಯ ಕೆಲಸ ಮಾಡಿದ್ದೇನೆ. ಅವರು ವಿಭಿನ್ನ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದನ್ನು ನಾನು ನೋಡಿದ್ದೇನೆ ಮತ್ತು ಅವರು ಪ್ರತಿಯೊಂದನ್ನು ಅತ್ಯಂತ ಸಮರ್ಪಣಾಭಾವದಿಂದ ನಿರ್ವಹಿಸುತ್ತಾರೆ. ನಮ್ಮ ಉಪರಾಷ್ಟ್ರಪತಿಯಾಗಿ ಯುವಜನ ಕಲ್ಯಾಣಕ್ಕಾಗಿ ಸಾಕಷ್ಟು ಸಮಯವನ್ನು ಮೀಸಲಿಟ್ಟಿದ್ದೀರಿ. ನಿಮ್ಮ ಬಹಳಷ್ಟು ಕಾರ್ಯಕ್ರಮಗಳು ಯುವ ಶಕ್ತಿಯ ಮೇಲೆ ಕೇಂದ್ರೀಕೃತವಾಗಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಉಪರಾಷ್ಟ್ರಪತಿ ಚುನಾವಣೆ ನಡೆದಿದ್ದು, ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಗಸ್ಟ್​ 11ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜಗದೀಪ್ ಧನಕರ್ ಮತ್ತು ಅವರ ಪತ್ನಿಯನ್ನು ವೆಂಕಯ್ಯ ನಾಯ್ಡು ಮತ್ತು ಅವರ ಪತ್ನಿ ಉಷಾ ನಾಯ್ಡು ಉಪರಾಷ್ಟ್ರಪತಿ ನಿವಾಸಕ್ಕೆ ಬರಮಾಡಿಕೊಂಡಿದ್ದರು. ಬಳಿಕ ಆ ಭವನವನ್ನು ಅವರಿಗೆ ಪರಿಚಯಿಸಿ, ಕಾರ್ಯದರ್ಶಿ ಕಚೇರಿಯ ಪರಿಚಯ ಮಾಡಿಕೊಟ್ಟಿದ್ದರು.

ರಾಜ್ಯಸಭಾ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ನಾವೆಲ್ಲರೂ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿಯ ಮುಕ್ತಾಯವಾಗುತ್ತಿರುವುದರಿಂದ ಧನ್ಯವಾದ ಹೇಳಲು ಇಲ್ಲಿಗೆ ಸೇರಿದ್ದೇವೆ. ಈ ಸದನಕ್ಕೆ ಇದು ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ. ಸದನದ ಹಲವಾರು ಐತಿಹಾಸಿಕ ಕ್ಷಣಗಳಿಗೆ ನೀವು ಸಾಕ್ಷಿಯಾಗಿದ್ದೀರಿ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಗುಜರಾತ್​​ನಲ್ಲಿ ತಾಯಿ ಹೀರಾಬೆನ್​​ರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ; ಒಟ್ಟಿಗೇ ಊಟ ಮಾಡಿದ ಅಮ್ಮ-ಮಗ

Leave a Reply

Your email address will not be published.