5ಜಿ ಸ್ಪೆಕ್ಟ್ರಮ್‌ ಹರಾಜು ಅಂತ್ಯ, 1.50 ಲಕ್ಷ ಕೋಟಿ ಮೊತ್ತಕ್ಕೆ ಜಿಯೋ ಕಂಪನಿ ಇಂದ ಗರಿಷ್ಠ ಬಿಡ್‌!

ನವದೆಹಲಿ : ಭಾರತದ ಈವರೆಗಿನ ಅತ್ಯಂತ ದೊಡ್ಡ ತರಂಗಾಂತರ ಹರಾಜು ಪ್ರಕ್ರಿಯೆ ಸೋಮವಾರ ಮುಕ್ತಾಯಗೊಂಡಿದೆ. ಈ ಏಳು ದಿನಗಳ ಹರಾಜಿನಲ್ಲಿ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 5ಜಿ ಟೆಲಿಕಾಂ ತರಂಗಾಂತರದ ದಾಖಲೆ ಮಾರಾಟವಾಗಿದೆ. ಈ ಹರಾಜಿನಲ್ಲಿ, ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ (ಜಿಯೋ) ಕಂಪನಿಯು ಗರಿಷ್ಠ ಮೊತ್ತದ ಬಿಡ್‌ ಮಾಡಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಈ ಹರಾಜಿನಲ್ಲಿ ಒಟ್ಟು 1,50,173 ಕೋಟಿ ಮೊತ್ತವನ್ನು ಜಿಯೋ ಬಿಡ್‌ ಮಾಡಿದೆ. ಹೈ ಸ್ಪೀಡ್ ಇಂಟರ್ನೆಟ್‌ಗಾಗಿ ನೀಡಲಾದ 5G ಸ್ಪೆಕ್ಟ್ರಮ್‌ನ ಹರಾಜು ಮೊತ್ತವು, ಕಳೆದ ವರ್ಷ ಮಾರಾಟವಾದ 4ಜಿ ಸ್ಪೆಕ್ಟ್ರಮ್‌ ಹರಾಜಿನ ಮೊತ್ತಕ್ಕಿಂತ ದುಪ್ಪಟ್ಟು, 2010ರಲ್ಲಿ ನಡೆದ 3ಜಿ ಹರಾಜು ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚಳವಾಗಿದೆ. ಕಳೆದ ವರ್ಷ 4ಜಿ ಸ್ಪೆಕ್ಟ್ರಮ್‌ ಹರಾಜಿನಿಂದ ಸರ್ಕಾರ, 77,815 ಕೋಟಿ ರೂಪಾಯಿ ಆದಾಯ ಪಡೆದಿದ್ದರೆ, 3ಜಿ ತರಂಗಾಂತರ ಹರಾಜು 50,968.37 ಕೋಟಿ ರೂಪಾಯಿ ಮೊತ್ಯಕ್ಕೆ ಹರಾಜಾಗಿತ್ತು. 4ಜಿಗೆ ಹೋಲಿಸಿದರೆ 5ಜಿಯಲ್ಲಿ 10 ಪಟ್ಟು ಹೆಚ್ಚಿನ ವೇಗದಲ್ಲಿ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ರಿಲಯನ್ಸ್ ಜಿಯೋ 5G ಸ್ಪೆಕ್ಟ್ರಮ್ ರೇಡಿಯೋ ಫ್ರೀಕ್ವೆನ್ಸಿಗಾಗಿ ಅತಿ ಹೆಚ್ಚು ಬಿಡ್ ಮಾಡಿದೆ. ಭಾರ್ತಿ ಏರ್‌ಟೆಲ್‌ ಹಾಗೂ ವೊಡಾಫೋನ್‌ ಐಡಿಯಾ ಲಿಮಿಟೆಡ್‌ ನಂತರದ ಸ್ಥಾನಗಳಲ್ಲಿವೆ.

Leave a Reply

Your email address will not be published. Required fields are marked *