ಆಗಸ್ಟ್ 5 ಕ್ಕೆ ಡಿ ಬಾಸ್ ದರ್ಶನ್ ರವರ ಮುಂದಿನ ಚಿತ್ರದ ಮುಹೂರ್ತ

ಬೆಂಗಳೂರು – ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಶೂಟಿಂಗ್ ಮುಗಿಸಿ ಈಗ ಡಬ್ಬಿಂಗ್ ಹಂತಕ್ಕೆ ಬಂದು ತಲುಪಿದೆ ಕ್ರಾಂತಿ ಸಿನಿಮಾದ ನಂತರ ದರ್ಶನ್ ರಾ ಮುಂದಿನ ಚಿತ್ರ ಯಾವುದು ಎಂಬ ಕುತೂಹಲಕ್ಕೆ ಈಗ ತರ ಬಿದ್ದಿದೆ ಈ ಮುಂಚೆ ಹೇಳಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬ್ಲಾಕ್ ಬಸ್ಟರ್ ಸಿನಿಮಾ ರಾಬರ್ಟ್ ಚಿತ್ರದ ನಿರ್ದೇಶಕರೊಂದಿಗೆ ಸಿನಿಮಾ ಮಾಡುವುದು ಖಚಿತವಾಗಿತ್ತು.

ನಿರ್ದೇಶಕ ತರುಣ್ ಸುಧೀರ್ ರವರೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮುಂದಿನ ಚಿತ್ರ ಆಗಸ್ಟ್ 5 ಕ್ಕೇ ವರಮಹಾಲಕ್ಷ್ಮಿ ಹಬ್ಬದಂದು ನೆರವೇರಲಿದೆ ಎಂದು ಚಿತ್ರ ತಂಡ ತಿಳಿಸಿದೆ.

ಈ ಚಿತ್ರವನ್ನು ಧೀರ ರಾಕ್ ಲೈನ್ ವೆಂಕಟೇಶ್ ರವರು ನಿರ್ಮಿಸುತ್ತಿದ್ದಾರೆ.

ನಾಯಿ ಕುರಿಮಂದೆಯನ್ನು ಕಾಯುತ್ತಿರುವ ಪೋಸ್ಟರ್

ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ನಾಯಿಯೊಂದು ಕುರಿಮಂದೆಯನ್ನು ಕಾಯುತ್ತಿರುವ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಲಾಗಿದೆ. ”ನಾಯಿ, ಕುರಿಗಳನ್ನು ಕಾಯುವುದು ಅದರ ಜೀವನದ ಧ್ಯೇಯ ಎಂದುಕೊಂಡಿರುತ್ತದೆ. ತನ್ನ ಜೀವನವನ್ನು ಅದು ತ್ಯಾಗ ಮಾಡಿ ಆ ಕುರಿ ಮಂದೆಯನ್ನು ಕಾಯುತ್ತದೆ” ಅದೇ ಅಂಶವನ್ನಿಟ್ಟುಕೊಂಡು ನಾವು ಸಿನಿಮಾ ಮಾಡುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕ ಸುಧೀರ್. ಅಂದಹಾಗೆ ಇದು ನಿಜ ಜೀವನದಲ್ಲಿ ನಡೆದಿರುವ ಕತೆಯಂತೆ.

 

 

Leave a Reply

Your email address will not be published. Required fields are marked *