ಪರೀಕ್ಷೆ ಅವ್ಯವಹಾರ ಹಿನ್ನೆಲೆ ಕಠಿಣ ನಿಯಮಗಳ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ. ಪಿಎಸ್ಐ ಮರು ಪರೀಕ್ಷೆ ಸದ್ಯದಲ್ಲೆ ನಡೆಯಲಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.

ಇಂದು ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪಿಎಸ್ಐ ನೇಮಕಾತಿಗೆ ಮರು ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು. ಒಂದಕ್ಕಿಂತ ಹೆಚ್ಚು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದ್ದು, ಬಂಧಿತರನ್ನು ಹೊರತುಪಡಿಸಿ 54 ಸಾವಿರ ಜನರಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

ಪರೀಕ್ಷೆ ಅವ್ಯವಹಾರ ಹಿನ್ನೆಲೆ ಕಠಿಣ ನಿಯಮಗಳ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ. ಪಿಎಸ್ಐ ಮರು ಪರೀಕ್ಷೆ ಸದ್ಯದಲ್ಲೆ ನಡೆಯಲಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.

ಇವರ ಅವ್ಯವಹಾರದಿಂದ ಸೆಲೆಕ್ಟ್ ಆದವರಿಗೆ ಅನ್ಯಾಯ ಆಗಿದೆ. ಹಾಗಾಗಿ ಮರು ಪರೀಕ್ಷೆಗೆ ಅವಕಾಶ ಕೊಟ್ಟಿದೆ. ಕಾಂಗ್ರೆಸ್ ನ ಸೀನಿಯರ್ ಲೀಡರ್ ಅಪರಾಧಿಗಳಿಗೆ ಕಿಟ್ ಕೊಟ್ಟಿದ್ದು ಜನಸಾಮಾನ್ಯರಲ್ಲಿ ತಪ್ಪು ಸಂದೇಶ ನೀಡಿದಂತಾಗಿದೆ ಎಂದರು.

ಪಿಎಸ್ಐ ಪರೀಕ್ಷೆಗೆ ಕಡಿಮೆ ಕೇಂದ್ರಗಳನ್ನು ತೆರೆದು ಜಾಮರ್ ಹಾಕಲು ಚಿಂತನೆ ನಡೆಸಲಾಗಿದೆ. ಹೊಸ ತಂತ್ರಜ್ಞಾನ ನಿರ್ಬಂಧ ಮಾಡೋ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ದೊಡ್ಡ ಎಕ್ಸಾಮ್ ಸೆಂಟರ್ ಮಾಡಲಾಗುವುದು.

ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಯಾರೇ ದೊಡ್ಡ ದೊಡ್ಡವರಿದ್ದರು ಕ್ರಮ ಕೈಗೊಳ್ಳಲಾಗುವುದು. ಪಾರದರ್ಶಕವಾಗಿ ಎಕ್ಸಾಮ್ ನಡೆಸಲಾಗುವುದು. ಯಾರೂ ಆತ್ಮ ವಿಶ್ವಾಸ ಕಳೆದು ಕೊಳ್ಳಬಾರದು ಎಂದು ಅಭ್ಯರ್ಥಿಗಳಿಗೆ ಹೇಳಿದರು.

ಎಕ್ಷಾಮ್ ಪೊಲೀಸ್ ಇಲಾಖೆ ನಡೆಸೋದಾ ಅಥವಾ ಯಾರು ನಡೆಸೋದು ಅನ್ನೋದನ್ನ ಮುಂದೆ ನಿರ್ಧಾರ ಮಾಡಲಾಗುವುದು. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

 

 

 

Leave a Reply

Your email address will not be published. Required fields are marked *