ತಾಯಿಗೆ_ತಕ್ಕ_ಮಗ ಸಿನಿಮಾ ಟಿಕೇಟ್ ಗಾಗಿ ಆದ ಕಾಲ್ತುಳಿತದಲ್ಲಿ ಪ್ರಾಣ ಬಿಟ್ಟ ಇಬ್ಬರು ಅಭಿಮಾನಿಗಳು.

1978. . .! ಅದು ಡಾ:ರಾಜ್ ಕುಮಾರ್ ರವರ ಯಶಸ್ವಿ ಚಿತ್ರಗಳ ಸುಗ್ಗಿಯ ಕಾಲ.ಶಂಕರ್ ಗುರು,ಆಪರೇಶನ್ ಡೈಮೆಂಡ್ ರಾಕೇಟ್,ತಾಯಿಗೆ ಮುಂತಾದ ಯಶಸ್ವಿ ಚಿತ್ರಗಳ ಪರ್ವಕಾಲವದು,ಶಂಕರ್ ಗುರು ಚಿತ್ರ ವೀಕ್ಷಿಸಲು ಹೊಗಿದ್ದ ಅಭಿಮಾನಿಯೊಬ್ಬ ಆದರ್ಶಾ ಚಿತ್ರಮಂದಿರದಲ್ಲಿ ಆ ರಷ್ ನಲ್ಲಿ ಪ್ರಾಣ ಕಳೆದು ಕೊಂಡಿದ್ದ .ಆದರೇ ಅದು ಯಾಕೋ ಅಷ್ಟು ಸುದ್ಧಿಯಾಗಲಿಲ್ಲ.ಆದರೇ ಆನಂತರ ತೆರೆಗೆ ಬಂದ ಡಾ ರಾಜ್ ಕುಮಾರ್ ರವರ ಆ ಚಿತ್ರ ಸಂಚಲನ ಮೂಡಿಸಿತು.

ತಾಯಿಗೆ ತಕ್ಕ ಮಗ. .. !

ಅಂದು ಡಾ ರಾಜ್ ಸಿನಿಮಾ ಬಿಡುಗಡೆ ದಿನ ಆಗುತ್ತಿದ್ದ ಗಲಭೆಯನ್ನು ತಪ್ಪಿಸಲು ಪೊಲೀಸರು ಬಿಡುಗಡೆ ದಿನಾಂಕ ಹೇಳದೆ ಬಿಡುಗಡೆ ಮಾಡಲು ಸಲಹೆ ನೀಡಿದ್ದರು ಆದರೆ ತಾಯಿಗೆ ತಕ್ಕ ಮಗ ಚಿತ್ರ ತಂಡ ದೊಡ್ದ ಎಡವಟ್ಟು ಮಾಡಿದ್ದರು ಚಿತ್ರೀಕರಣವಾಗುತ್ತಿದ್ದ ಸಮಯದಲ್ಲೇ ಬಾಕ್ಸಿಂಗ್ ಗ್ಲೌಸ್ ತೊಟ್ಟು ಫೋಸ್ ನೀಡಿದ ಅಣ್ಣಾವ್ರ ಪೋಸ್ಟರ್ ಅನ್ನು ಬೀದಿಗಳಲ್ಲಿ ಅಂಟಿಸಿದ್ದರು ಆ ಸ್ಟೈಲ್ ನೋಡಿ ಅಭಿಮಾನಿಗಳು ರೋಮಾಂಚನಗೊಂಡಿದ್ದರು.ಗದೆ ಹಿಡಿದು ವ್ಯಾಯಾಮ ಮಾಡುವ ಭಂಗಿಯಲ್ಲಿ ಕಬ್ಬಿಣದಂತಹಾ ದೇಹದಾರ್ಢ್ಯಕ್ಕೆ

ಬೆರಗುಗೊಳ್ಳುತ್ತಿದ್ದರು.ಭಾರಿ ಕುತೂಹಲ ಹುಟ್ಟಿಸಿದ್ದ ಅಣ್ಣನ ತಾಯಿಗೆ ತಕ್ಕ ಮಗ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಹಬ್ಬ ಆಚರಿಸಿದ್ದರು.ಮೊದಲ ದಿನದ ಟಿಕೇಟ್ ಪಡೆಯಲು ಅಭಿಮಾನಿಗಳು ದೊಡ್ಡ ಪೈಪೋಟಿ ನಡೆಸಿದ್ದರು.ಬೆಂಗಳೂರಿನ ವಿ.ವಿ.ಪುರಮ್ ಸಮೀಪವಿದ್ದ ಒಕ್ಕಲಿಗರ ಸಂಘದ ಆವರಣದ ಸಂಜಯ ಚಿತ್ರಮಂದಿರ ಡಾ||ರಾಜ್ ಚಿತ್ರ ಪ್ರದರ್ಶನಕ್ಕೆ ಹೆಸರಾಗಿತ್ತು.ಈ ಕಡೆ ಮಾವಳ್ಳಿ ಆ ಕಡೆ ಪಾರ್ವತಿಪುರ ಚದುರಡಿಗಳ ದೂರದ ಚಾಮರಾಜಪೇಟೆ,ಬಗಲಲ್ಲಿನ ಬಸವನಗುಡಿ, ಒಂದೆರೆಡು ರಸ್ತೆಗಳ ದೂರದ ವಿ.ವಿ.ಪುರ. . .ಹೀಗೆ ಸಂಜಯ ಚಿತ್ರಮಂದಿರದ ಸುತ್ತಲೂ ಡಾ||ರಾಜ್ ಕುಮಾರ್ ಅಭಿಮಾನಿಗಳು ರಾರಾಜಿಸುತ್ತಿದ್ದರು.

..

ಡಾ||ರಾಜ್ ಕುಮಾರ್ ಹೊಸ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾದರೆ ತೊಂದರೆ ಆಗುವುದನ್ನು ಮುಂಚೆಯೇ ಸಲಹೆ ನೀಡಿದ್ದರು ಅದನ್ನು ಲೆಕ್ಕಿಸದೆ ಪ್ರಚಾರ ಮಾಡಿದ ಪರಿಣಾಮ ಅಭಿಮಾನಿಗಳು ಒಂದು ದೊಡ್ಡ ಹಬ್ಬಕ್ಕೆ ಸಿದ್ಧತೆ ಮಾಡಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದರು.ತಾಯಿಗೆ ತಕ್ಕ ಮಗ ಚಿತ್ರದ ಮೊದಲ ದಿನದ ಟಿಕೇಟ್ ಖರೀದಿಗಾಗಿ ಸಂಜಯ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಮಹಾಪೂರವೇ ನೆರಿದ್ದಿತ್ತು.ಗುದ್ದಾಟ ನೂಕು ನುಗಲು ತಳ್ಳಾಟ ಜಗ್ಗಾಟ ಹೀಗೆ ಅಲ್ಲಿ ತಾಯಿಗೆ ತಕ್ಕ ಮಗ ಚಿತ್ರಕ್ಕೆ ಮೊದಲ ದಿನದ ಪ್ರದರ್ಶನದ ಟಿಕೇಟಿಗಾಗಿ ದೊಡ್ಡ ಸಮರವೇ ನಡೆದಿತ್ತು.ಸಂಜಯ್ ಚಿತ್ರಮಂದಿರದಲ್ಲಿ ಎಲ್ಲರೂ ಒಂದೇ ಸಮನೆ ಒಂದೇ ಸಾಲಿನಲ್ಲಿ ಬರಬೇಕೆಂಬ ಕಾರಣಕ್ಕೆ ಕಬ್ಬಿಣದ ರಾಡ್ ಗಳನ್ನ ಅಕ್ಕ ಪಕ್ಕ ಹಾಕಿದ್ದರು.

ಅಂದು ಅಂದರೆ ದಿನಾಂಕ 13-2-1978 ರಂದು ತಾಯಿಗೆ ತಕ್ಕ ಮಗ ಚಿತ್ರದ ಮ್ಯಾಟನೀ ಪ್ರದರ್ಶನ ಆ ಸಮಯದಲ್ಲಿ ಟಕೇಟ್ ಪಡೆಯಲು ನೂರಾರು ಅಭಿಮಾನಿಗಳು ಸಾಲಿನಲ್ಲಿ ಟಕೇಟ್ ಗಾಗಿ ನಿಂತಿದ್ದರು.ಅವರ ಕಾತುರ ತುಂಬಾ ತೀವ್ರವಾಗಿತ್ತು.ಒಬ್ಬರಿಗೊಬ್ಬರು ಒತ್ತರಿಸಿ ನಿಂತಿದ್ದರು ಆ ಒತ್ತಡ ಹೇಗಿತ್ತೆಂದರೇ ಅಲ್ಲಿ ಸರಾಗವಾದ ಉಸಿರಾಟಕ್ಕೂ ತೊಂದರೆಯಾದಂತಿತ್ತು.ಅದೇ ವೇಳೆ ಆ ಸಾಲಿನಲ್ಲಿದ್ದ ಇಬ್ಬರು ಹುಡುಗರು ಉಸಿರು ಗಟ್ಟಿ ಪ್ರಜ್ಞೆ ತಪ್ಪಿದರು ಅವರನ್ನ ಸಾಲಿನಿಂದ ಹೊರ ತಂದು ನೋಡಿದಾಗ ಅವರು ಸತ್ತುಹೋಗಿದ್ದರು! ದೇವಸ್ಥಾನಗಳಲ್ಲಿ ಪುಣ್ಯ ಸ್ಥಳಗಳಲ್ಲಿ ನೂಕುನುಗ್ಗಲಿಗೆ ಸಾವು ಅನ್ನೋ ವಿಚಾರವನ್ನ ಕೇಳಿರುತ್ತೇವೆ ಅಥವಾ ಓದಿರುತ್ತೇವೆ ಆದರೆ ಒಬ್ಬ ನೆಚ್ಚಿನ ನಟನ ಸಿನಿಮಾ ನೋಡುವ ಬರದಲ್ಲಿ ಪ್ರಾಣವನ್ನೇ ಬಿಟ್ಟ ಅಭಿಮಾನಿಗಳ ದುರಂತ ಹಾಗು ಬೇಸರದ ಕಥೆ ಇದು…

ತಾಯಿಗೆ ತಕ್ಕ ಮಗ ಚಿತ್ರದ ಅಭಿಮಾನಿಗಳ ದುರಂತ ಸಾವಿನ ನಂತರ ಅಂದರೇ ಅದೇ 17-5-1978 ರಂದು ಬಿಡುಗಡೆಯಾದ ಚಿತ್ರ #ಹುಲಿಯ_ಹಾಲಿನ_ಮೇವು.ಈ ಚಿತ್ರಕ್ಕೆ ಮತ್ತೆ ಅದೇ ಟಿಕೇಟ್ ವಿತರಣೆಯ ಸಮಸ್ಯೆಯಾಯಿತು, ಡಾ.ರಾಜ್ ಕುಮಾರ್ ರವರ ಅಭಿಮಾನಿಗಳ ಮಹಾಪೂರವನ್ನು ನಿಯಂತ್ರಿಸುವುದೇ ಒಂದು ದೊಡ್ಡ ಸಮಸ್ಯೆಯಾಯಿತು.ಅಂತಹ ಸಂದರ್ಭದಲ್ಲಿ ಪೊಲೀಸರು ಒಂದು ಪ್ಲಾನ್ ಮಾಡಿದರು ಅದೇನೆಂದರೆ #ಹುಲಿಯ_ಹಾಲಿನ_ಮೇವು ಚಿತ್ರದ ಮೊದಲ ದಿನದ ಟಿಕೇಟುಗಳನ್ನು ನಗರದ ರೇಸ್ ಕೋರ್ಸ್ ನಲ್ಲಿ ವಿತರಿಸಲಾಯಿತು.ಅಲ್ಲಿ ಬಂಬು ಸಾರ್ವೆಗಳನ್ನು ಬಳಸಿ ಸಾಲು ಸಾಲಾಗಿ ಅಭಿಮಾನಿಗಳು ನಿಲ್ಲುವಂತೆ ಮಾಡಿ ಬಿಗೀ ಪೊಲೀಸ್ ಬಂದೋಬಸ್ತಿನಲ್ಲಿ ಟಿಕೇಟ್ ವಿತರಿಸಲಾಯಿತು.ಒಂದು ಚಲನಚಿತ್ರದ ಟಿಕೇಟುಗಳನ್ನ ನೀಡಲು,ಅಭಿಮಾನಿಗಳನ್ನ ನಿಯಂತ್ರಿಸಲು ರೇಸ್ ಕೋರ್ಸ್ನಲ್ಲಿ ಟಿಕೇಟ್ ನೀಡಿದ್ದು ಅಣ್ಣಾ ಡಾ||ರಾಜ್ ಕುಮಾರ್ ಅವರ ಚಿತ್ರಕ್ಕೆ ಮಾತ್ರ.ಅದೊಂದು ಐತಿಹಾಸಿಕ ದಾಖಲೆ.ಅಂದಿಗೆ ಟಿ.ವಿ,ಮೊಬೈಲ್,ಫೇಸ್ಬುಕ್,ವಾಟ್ಸ್ ಅಪ್ ಯಾವುದೂ ಇರಲಿಲ್ಲ.ಆದರೆ ಅಂತಹ ಸಂದರ್ಭದಲ್ಲಿ ದಾಖಲೆಗಳ ದಾಖಲೆ ಮುರಿದದ್ದು ಡಾ||ರಾಜ್ ಕುಮಾರ್ ರವರ ಜನಪ್ರಿಯತೆ.

Leave a Reply

Your email address will not be published. Required fields are marked *