ಬಾರ್ ಆ್ಯಂಡ್ ರೆಸ್ಟೋರೆಂಟ್​ಗಳಲ್ಲಿ ಮದ್ಯಪಾನ ಖಾಲಿ! ಇಂದು ಸಂಜೆಯಿಂದ ಮದ್ಯ ಪ್ರಿಯರಿಗೆ ಇಲ್ಲ ಎಣ್ಣೆ

ಬೆಂಗಳೂರು: ರಾಜ್ಯದ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಲ್ಲಿ (Bar And Restaurants) ಮದ್ಯಪಾನ (Alcohol) ಖಾಲಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನೂತನ ಸಾಫ್ಟ್​ವೇರ್​ ಅಪ್​ಡೇಟ್ ಆಗಿರುವ ಹಿನ್ನೆಲೆ ಬಿಲ್ ಮಾಡಲು ಆಗದೆ ಮದ್ಯ ಪೂರೈಕೆ ಆಗುತ್ತಿಲ್ಲ. ಕೆಎಸ್​​ಬಿಸಿಎಲ್​ನಿಂದ​ (KSBCL ) ಬಾರ್​ಗಳಿಗೆ ಮದ್ಯ ಪೂರೈಕೆಯಾಗುತ್ತಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆಯಿಂದ ರಾಜ್ಯದ ಎಣ್ಣೆ ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿದೆ. ಕೆಲ ಅಂಗಡಿಗಳಲ್ಲಿ ಅಲ್ಪ ಸ್ಪಲ್ಪ ಎಣ್ಣೆ ಇದೆ. ಇಂದು (ಏಪ್ರಿಲ್ 5) ಸಂಜೆ ವೇಳೆಗೆ ರಾಜ್ಯದ ಎಲ್ಲಾ ಅಂಗಡಿಗಳಲ್ಲಿ ಎಣ್ಣೆ ಸಂಪೂರ್ಣ ಖಾಲಿಯಾಗುವ ಸಾಧ್ಯತೆಯಿದೆ.

ನಿನ್ನೆಯಿಂದ ರಾಜ್ಯದಲ್ಲಿ ಮದ್ಯಪಾನ ಸಿಗುತ್ತಿಲ್ಲ. ನಿನ್ನೆಯಿಂದ ರಾಜ್ಯದ ಯಾವುದೇ CL-9 ಬಾರ್ ಅಂಡ್ ರೆಸ್ಟೋರೆಂಟ್, CL- 2 ವೈನ್ ಸ್ಟೋರ್, CL- 11C  ಎಂಎಸ್ಐಎಲ್​ಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಿಂದ ಸಪ್ಲೈ ಆಗುತ್ತಿಲ್ಲ. ಕೆಎಸ್​ಬಿಸಿಎಲ್​ನಿಂದ ನಿಂದ ಪ್ರತಿದಿನ ಪೂರೈಕೆ ಆಗುತ್ತಿತ್ತು. ಆದರೆ ಹೊಸ ಬಿಲ್ಲಿಂಗ್ (web indent) ವ್ಯವಸ್ಥೆಯಿಂದ ಕೆಎಸ್​ಬಿಸಿಎಲ್​​ನಿಂದ ಬಿಲ್ ಆಗುತ್ತಿಲ್ಲ. ಹೀಗಾಗಿ ಮದ್ಯಪಾನ  ಎಣ್ಣೆ ಸಿಗುತ್ತಿಲ್ಲ.

ನಾಳೆ ಪ್ರತಿಭಟನೆ:

ನಿನ್ನೆಯಿಂದ Web Indenting ಮೂಲಕ ಮದ್ಯ ಖರೀದಿಸಲು ಎಸ್​ಬಿಸಿಎಲ್​​ ಆದೇಶ ನೀಡಿತ್ತು. ಆದರೆ ಈ ಪದ್ಧತಿಯಿಂದ ಮದ್ಯಪಾನ ಸಿಗುತ್ತಿಲ್ಲ. ಮದ್ಯಪಾನ ಖರೀದಿಸಲು ಸನ್ನದುದಾರರಿಗೆ ತೊಂದರೆಯಾಗುತ್ತಿದೆ. ಒಂದು ತಿಂಗಳವರೆಗೆ ಹೊಸ ಪದ್ಧತಿ ಜೊತೆಗೆ ಹಳೆ ಪದ್ಧತಿ ಚಾಲ್ತಿಯಲ್ಲಿರುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮದ್ಯಪಾನ ಇಲ್ಲದೆ ಸನ್ನದುದಾರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಒಂದು ತಿಂಗಳ ಮಟ್ಟಿಗಾದರೂ ಹೊಸ ಪದ್ಧತಿಯೊಂದಿಗೆ ಹಳೆ ಪದ್ಧತಿ ಚಾಲ್ತಿಯಲ್ಲಿ ಇರುವಂತೆ ಮಾಡಲು ಒತ್ತಾಯಿಸಿ ಪ್ರತಿಭಟನೆ ನಡೆಸಲು ಬೆಂಗಳೂರು ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ತೀರ್ಮಾನಿಸಿದೆ. ನಾಳೆ ರಾಜ್ಯದ ಎಲ್ಲಾ ಕೆಎಸ್​ಬಿಸಿಎಲ್​ ಡಿಪೋಗಳ ಎದುರು ಧರಣಿ ನಡೆಸಲಿದ್ದಾರೆ.

 

Leave a Reply

Your email address will not be published. Required fields are marked *