ಇಂದು CM ‘ಹೈಕಮಾಂಡ್’ ಭೇಟಿ.. ಬೊಮ್ಮಾಯಿಗಿಂತ ಮೊದಲು ಡೆಲ್ಲಿಗೆ ಜಿಗಿದ 10 ಸಚಿವರು..!

ಇಂದು ದೆಹಲಿಯಾತ್ರೆ ಮಾಡಲಿರುವ ಸಿಎಂ ಬೊಮ್ಮಾಯಿ

ಕಮಲ ಕೋಟೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಎಲೆಕ್ಷನ್ ಕ್ಯಾಬಿನೆಟ್ ರಚನೆಗೂ ಮುನ್ನವೇ ಕೇಸರಿ ಪಡಸಾಲೆಯಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಗೃಹ ಸಚಿವ ಅಮಿತ್ ಶಾ ಬಂದು ಹೋದ ಮೇಲಂತೂ ಬಿಜೆಪಿಗರು ಫುಲ್ ಆ್ಯಕ್ಟಿವ್ ಆಗಿದ್ದಾರೆ. ಮತಗಳ ಕ್ರೋಡಿಕರಣ, ಪಕ್ಷ ಸಂಘಟನೆ ಸೇರಿ ವಿವಿಧ ಟಾಸ್ಕ್​ಗಳು ರಾಜ್ಯದ ಕಮಲ ನಾಯಕರ ಹೆಗಲೇರಿದೆ. ಹೀಗಾಗಿ ಚುನಾವಣಾ ವರ್ಷ ಇರೋದ್ರಿಂದ ಸಂಪುಟದಲ್ಲೇ ಇರಲು ಸಚಿವರುಗಳು ಕಸರತ್ತು ನಡೆಸ್ತಿದ್ದಾರೆ. ಇದೆಲ್ಲದರ ನಡುವೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಾತ್ರೆ ಕೈಗೊಳ್ಳಲಿದ್ದಾರೆ.. ಆದ್ರೆ ಸಿಎಂ ಬೊಮ್ಮಾಯಿಗೂ ಮುನ್ನವೇ ಸಂಪುಟದ 10ಕ್ಕೂ ಹೆಚ್ಚು ಸಚಿವರು ದೆಹಲಿ ಪ್ರಯಾಣ ಮಾಡಿದ್ದಾರೆ.

ಸಚಿವರ ದೆಹಲಿಯಾತ್ರೆ ರಹಸ್ಯ!

ಸೀಕ್ರೆಟ್‌-1 : ರಾಜ್ಯದಲ್ಲಿ ಸದ್ಯದಲ್ಲೇ ಎಲೆಕ್ಷನ್ ಕ್ಯಾಬಿನೆಟ್​​ ರಚನೆ

ಸೀಕ್ರೆಟ್‌-2 : ಸಂಪುಟದಲ್ಲಿ ಸ್ಥಾನ ಉಳಿಸಿಕೊಳ್ಳಲು ದೆಹಲಿಯಾತ್ರೆ

ಸೀಕ್ರೆಟ್‌-3 : ಉನ್ನತ ಸ್ಥಾನದ ಮೇಲೆ ಕಣ್ಣಿಟ್ಟವರು ದೆಹಲಿ ಪ್ರಯಾಣ

ಸೀಕ್ರೆಟ್‌-4 : ಡಿಸಿಎಂ, ಸಂಪುಟ ಸ್ಥಾನಮಾನಗಳಿಗೆ ‘ಹೈ’ ಬಳಿ ಲಾಬಿ

ಯಾರೆಲ್ಲಾ ದೆಹಲಿಯಾತ್ರೆ?

ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ

ಆರ್. ಅಶೋಕ್, ಕಂದಾಯ ಸಚಿವ

ಮುರುಗೇಶ್ ನಿರಾಣಿ, ಕೈಗಾರಿಕಾ ಸಚಿವ

ಸುನಿಲ್ ಕುಮಾರ್, ಇಂಧನ ಸಚಿವ

ಶಂಕರ್ ಮುನೇನಕೊಪ್ಪ, ಜವಳಿ ಸಚಿವ

ಮಾಧುಸ್ವಾಮಿ, ಕಾನೂನು & ಸಂಸದೀಯ ಸಚಿವ

ಪ್ರಭು ಚೌಹಾಣ್, ಪಶುಸಂಗೋಪನಾ ಸಚಿವ

ಸಿ.ಸಿ. ಪಾಟೀಲ್, ಲೋಕೋಪಯೋಗಿ ಸಚಿವ

ಬಿ.ಶ್ರೀರಾಮುಲು, ಸಾರಿಗೆ ಸಚಿವ

ಜಗದೀಶ್ ಶೆಟ್ಟರ್, ಮಾಜಿ ಸಿಎಂ

ಹೀಗೆ ಸಾಲು ಸಾಲು ಸಚಿವರು ದೆಹಲಿಯತ್ತ ಮುಖ ಮಾಡಿದ್ದಾರೆ. ಶೀಘ್ರದಲ್ಲೇ ಎಲೆಕ್ಷನ್ ಕ್ಯಾಬಿನೆಟ್ ರಚನೆಯಾಗ್ತಿದೆ. ಚುನಾವಣಾ ದೃಷ್ಟಿಯಿಂದಲೂ ಕ್ಯಾಬಿನೆಟ್​ನಲ್ಲಿ ಯಾವ ಭಾಗಕ್ಕೆ ಸ್ಥಾನಮಾನ ನೀಡ್ಬೇಕು ಎಂಬ ಬಗ್ಗೆ ದೆಹಲಿ ನಾಯಕರು ಅರಿತಿದ್ದಾರೆ. ಇದೆಲ್ಲದರ ನಡುವೆ ಸ್ಥಾನಮಾನ ಉಳಿಸಿಕೊಳ್ಳಲು ಸಚಿವರ ದಂಡು ದೆಹಲಿ ಯಾತ್ರೆ ಮಾಡಿದ್ದಾರೆ. ಆದ್ರೆ ಇದರ ಎಷ್ಟರ ಮಟ್ಟಿಗೆ ವರ್ಕ್​​ಔಟ್ ಆಗುತ್ತೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

 

Leave a Reply

Your email address will not be published. Required fields are marked *