ರಾಹುಲ್​ ಗಾಂಧಿ ಹೆಸರಿಗೆ ತನ್ನೆಲ್ಲಾ ಆಸ್ತಿ ಬರೆದುಕೊಟ್ಟ 78ರ ವೃದ್ಧೆ..

ನವದೆಹಲಿ: ಉತ್ತರಾಖಂಡ್ ಡೆಹ್ರಾಡೂನ್‌ ಮೂಲದ 78 ವರ್ಷದ ವೃದ್ಧೆಯೊಬ್ಬರು ತನ್ನ ಆಸ್ತಿಯನ್ನು ಕಾಂಗ್ರೆಸ್​ ವರಿಷ್ಠ ರಾಹುಲ್​ ಗಾಂಧಿ ಹೆಸರಿಗೆ ವಿಲ್​ ಮಾಡಿದ್ದಾರೆ. ತನ್ನ 50 ಲಕ್ಷ ಮೌಲ್ಯದ ಆಸ್ತಿ ಜತೆಗೆ 10 ತೊಲ ಚಿನ್ನವನ್ನು ಕೂಡ ರಾಹುಲ್ ಗಾಂಧಿ ಹೆಸರಿಗೆ ಬರೆದಿದ್ದಾರೆ.

ರಾಹುಲ್​ ಗಾಂಧಿಯವರಿಗೆ ತನ್ನ ಸಮಸ್ತ ಆಸ್ತಿಯನ್ನು ವಿಲ್​​ ಮಾಡಿರೋ 78 ವರ್ಷದ ವೃದ್ಧೆ ಹೆಸರು ಪುಷ್ಪಾ ಮುಂಜಿಯಾಲ್. ಇವರು ಡೆಹ್ರಾಡೂನ್ ನ್ಯಾಯಾಲಯದಲ್ಲಿ ವಿಲ್ ಸಲ್ಲಿಸಿದ್ದು, ರಾಹುಲ್ ಗಾಂಧಿಗೆ ತಮ್ಮ ಆಸ್ತಿಯನ್ನು ಬರೆದುಕೊಟ್ಟಿದ್ದಾರೆ.

ನಾನು ರಾಹುಲ್​ ಗಾಂಧಿ ವಿಚಾರಗಳಿಂದ ಪ್ರಭಾವಿತಳಾಗಿದ್ದೇನೆ. ರಾಹುಲ್​ ಗಾಂಧಿ ದೇಶಕ್ಕೆ ಅಗತ್ಯ. ಹೀಗಾಗಿ ನಾನು ನನ್ನ ಆಸ್ತಿಯನ್ನು ನೀಡಿದ್ದೇನೆ ಎಂದಿದ್ದಾರೆ ಪುಷ್ಪಾ ಮುಂಜಿಯಾಲ್.

ಕಾಂಗ್ರೆಸ್ ಮುಖಂಡ ಪ್ರೀತಮ್ ಸಿಂಗ್ ಸಮ್ಮುಖದಲ್ಲೇ ಪುಷ್ಪಾ ಮುಂಜಿಯಲ್ ರಾಹುಲ್ ಗಾಂಧಿಗೆ ತಮ್ಮ ಆಸ್ತಿಯನ್ನು ವಿಲ್ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್ ಮಹಾನಗರ ಅಧ್ಯಕ್ಷ ಲಾಲ್‌ಚಂದ್ ಶರ್ಮಾ ಕೂಡ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *