ಹೆಡ್ ಬುಷ್ ಪ್ರೀ ರಿಲೀಸ್ ದಾವಣಗೆರೆಯಲ್ಲಿ
ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಚಿತ್ರದ ಪ್ರೀ ರಿಲೀಸ್ ಈವೆಂಟ್ ಅ.16ರಂದು ದಾವಣಗೆರೆಯ ಎಂ.ಬಿ.ಎ ಗ್ರೌಂಡ್ ನಲ್ಲಿ ನಡೆಯಲಿದೆ. ರಮ್ಯಾ ಹಾಗೂ ರಚಿತಾರಾಮ್ ಹಾಗೂ ನೀನಾಸಂ ಸತೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ , ಇನ್ನೂ ಧನಂಜಯ್ ನಟಿಸಿದ್ದಷ್ಟೇ ಅಲ್ಲದೆ ನಿಮಾರ್ಣದ ಹೊಣೆಯನ್ನೂ ಹೊತ್ತುಕೊಂಡಿರುವುದರಿಂದ ಪ್ರಚಾರದ ಜವಾಬ್ದಾರಿಯೂ ಅವರ ಮೇಲಿದೆ. ಹಾಗಾಗಿ ದೊಡ್ಡಮಟ್ಟದಲ್ಲಿ ಸಿನಿಮಾವನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಮಾನ್ಸೂನ್ ರಾಗ ಸಿನಿಮಾದಲ್ಲಿ ಧನು ಜೊತೆ ರಚ್ಚು ಅಭಿನಯಿಸಿದ ಸಮಯದಿಂದ ಸಖತ್ ಕ್ಲೋಸ್ ಆಗಿದ್ದಾರೆ. ಹಾಗೇ ಯಾವುದೇ ಸಿನಿಮಾ ಕಾರ್ಯಕ್ರಮವಿದ್ದರೂ ಮೋಹಕ ತಾರೆ ರಮ್ಯಾ ಸಪೋರ್ಟ್ ಮಾಡುತ್ತಿರುವ ಕಾರಣ, ಹೆಡ್ಬುಷ್ ತಂಡಕ್ಕೆ ಸಾಥ್ ಕೊಟ್ಟಿದ್ದಾರೆ.