ಪುನೀತ್ ರಾಜ್ಕುಮಾರ್ (Puneeth Rajkumar) ಅವರು ತಿಂಡಿ ಪ್ರಿಯರಾಗಿದ್ದರು. ಯಾವುದಾದರೂ ಊರಿಗೆ ತೆರಳಿದರೆ ಅಲ್ಲಿನ ತಿನಿಸು ಟ್ರೈ ಮಾಡುತ್ತಿದ್ದರು. ಅನೇಕ ಸಂದರ್ಶನಗಳಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದಿದೆ. ಇಂದು (ಮಾರ್ಚ್ 17) ಪುನೀತ್ ರಾಜ್ಕುಮಾರ್ ಜನ್ಮದಿನ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ನಮಿಸುವ ಕೆಲಸ ಆಗುತ್ತಿದೆ. ಅಪ್ಪು ಇಷ್ಟದ ತಿಂಡಿಯನ್ನು ಇಟ್ಟು ಮಗಳು ವಂದಿತಾ ನಮಿಸಿದ್ದಾರೆ.