ಹಾವೇರಿ: ವಿಧಾನಪರಿಷತ್ ಸದಸ್ಯ (MLC) ಆರ್.ಶಂಕರ್ ಅವರ ರಾಣೇಬೆನ್ನೂರಿನ (Ranebennur) ಬೀರಲಿಂಗೇಶ್ವರ ನಗರದ ಮನೆ ಮೇಲೆ ಮಂಗಳವಾರ ತಡರಾತ್ರಿ ಐಟಿ ಅಧಿಕಾರಿಗಳು (IT ride) ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಗೃಹ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಹಂಚಲು ತಂದಿದ್ದ ವಸ್ತುಗಳು ಪತ್ತೆಯಾಗಿವೆ. ಶಂಕರ್ ಅವರ ಚಿತ್ರ ಇರುವ ಸೀರೆ ಬಾಕ್ಸ್, ತಟ್ಟೆ, ಲೋಟಾ, ಶಾಲಾ ಹಾಗೂ ಪದವಿ ಕಾಲೇಜು (College) ಮಕ್ಕಳಿಗೆ ಹಂಚಲು ತಂದಿದ್ದ ಸ್ಕೂಲ್ ಬ್ಯಾಗ್‍ಗಳನ್ನು (School bag) ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ:
400 ವರ್ಷಗಳಷ್ಟು ಹಳೆಯದಾದ ‘ಲಿಂಗ ಮುದ್ರೆ’ ಕಲ್ಲು ಉಡುಪಿಯಲ್ಲಿ ಪತ್ತೆ!
ಹಾವೇರಿ ಉಪವಿಭಾಗಧಿಕಾರಿ ದಾಖಲೆ ಪತ್ರ, ಬಿಲ್ ಮತ್ತು ಸ್ಟಾಕ್ ಚೆಕ್‍ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಂಕರ್, ಯಾರದ್ದೋ ಕುಮ್ಮಕ್ಕಿನಿಂದ ಈ ದಾಳಿ ನಡೆದಿದೆ. ನಾನು ದುಡಿದ ಹಣವನ್ನು ಸಮಾಜ ಸೇವೆಗೆ (Social service) ಬಳಕೆ ಮಾಡುತ್ತಿದ್ದೇನೆ ಎಂದಿದ್ದಾರೆ.
