ಮಂದಿರ ಮಸೀದಿ ಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡ್ತಾರೆ – ಅಶೋಕ್ ಖೇಣಿ ವಿವಾದಾತ್ಮಕ ಹೇಳಿಕೆ

ಬೀದರ್ : ಮಸೀದಿ (Mosque) ಹಾಗೂ ಮಂದಿರಗಳಲ್ಲಿ (Temple) ಮದ್ಯ ಮಾರಾಟ ಮಾಡುತ್ತಾರೆ ಎಂದು ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದ ನೈಸ್‌ ಖ್ಯಾತಿಯ ಅಶೋಕ್ ಖೇಣಿ  (Ashok Kheny) ಇದೀಗ ಸ್ಪಷ್ಟನೆ ನೀಡಿ ಉಲ್ಟಾ ಹೊಡೆದಿದ್ದಾರೆ‌.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಮಸೀದಿ ಬಳಿ, ಮಂದಿರದ ಬಳಿ ಹಾಗೂ ಸ್ಕೂಲ್ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ ಎಂದು ನಾನು ಹೇಳಿದ್ದೆ. ಆದರೆ ಕೆಲವರು ತಮ್ಮ ಸ್ವಲಾಭಕ್ಕಾಗಿ ತಿರುಚಿ ಹೇಳಿದ್ದಾರೆ ಎಂದು ಉಲ್ಟಾ ಹೊಡೆದಿದ್ದಾರೆ.

ನಾನು ಜಾತ್ಯತೀತ ವ್ಯಕ್ತಿಯಾಗಿದ್ದು, ಎಲ್ಲಾ ಧರ್ಮ, ಜಾತಿಯವರು ನನ್ನ ಸಹೋದರ, ಸಹೋದರಿಯರಿದ್ದಂತೆ. ಹೀಗಾಗಿ ಕೆಲವರು ನನಗೆ ತೊಂದರೆ ಕೊಟ್ಟು, ಅವರ ಲಾಭಕ್ಕಾಗಿ ಸುಳ್ಳುಗಳ ಮೇಲೆ ಸುಳ್ಳು ಹೇಳುತ್ತಿದ್ದಾರೆ. ಹೀಗಾಗಿ ನಾನು ಇಂತಹ ವಿವಾದಾತ್ಮಕ ಹೇಳಿಕೆ ಕೊಟ್ಟಿಲ್ಲ, ಆದರೂ ಕ್ಷೇತ್ರದ ಜನರಿಗೆ ಬೇಸರವಾಗಿರಬಹುದು ಎಂದು ಹೇಳಿದರು.

ಈ ಹೇಳಿಕೆಗೆ ಶನಿವಾರ ವ್ಯಾಪಕ ವಿರೋಧ ವ್ಯಕ್ತವಾಗಿದ್ದವು. ಅಷ್ಟೇ ಅಲ್ಲದೇ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದಲ್ಲಿ ಅಶೋಕ್ ಖೇಣಿ ವಿರುದ್ಧ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಬೀದರ್ (Bidar) ದಕ್ಷಿಣ ಕ್ಷೇತ್ರದ ಜನರು ಪ್ರತಿಭಟನೆ ನಡೆಸಿದ್ದರು. ಕಾಂಗ್ರೆಸ್ (Congress) ಪಕ್ಷದಿಂದ ಖೇಣಿ ಅವರನ್ನ ಉಚ್ಛಾಟನೆ ಮಾಡುವಂತೆ ಒತ್ತಾಯಿಸಿದ್ದರು. ಆ ಬಳಿಕ ಭಾನುವಾರ ಬೀದರ್‌ನಲ್ಲಿ ವಿವಾದಾತ್ಮಕ ಹೇಳಿಕೆಗೆ ಖೇಣಿ ಸ್ಪಷ್ಟನೆ ನೀಡಿದ್ದಾರೆ.

ಹಿಜಾಬ್‌ ಹೇಳಿಕೆ ವಿವಾದ: ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡ ಸಿದ್ದರಾಮಯ್ಯ

Leave a Reply

Your email address will not be published. Required fields are marked *