ತಾಯಿ ಕುಕೃತ್ಯಕ್ಕೆ ಕಾರಣವಾಯ್ತಾ ಪರ್ಸನಲ್ ಮ್ಯಾಟರ್ – ಮಗು ಕೊಂದ ಕೇಸ್‍ಗೆ ಟ್ವಿಸ್ಟ್

ಬೆಂಗಳೂರು: ಹೆತ್ತ ತಾಯಿಯೇ ತನ್ನ ಕಂದಮ್ಮನನ್ನ ನಾಲ್ಕನೇ ಮಹಡಿ ಮೇಲಿನಿಂದ ತಳ್ಳಿ ಕೊಲೆ ಮಾಡಿದ ಕೇಸ್‍ನಲ್ಲಿ ಖಾಕಿಗೆ ಡೌಟ್ ಶುರುವಾಗಿದೆ.

ಹೌದು. ಡೆಂಟಲ್ ಡಾಕ್ಟರ್‍ರೊಬ್ಬರು ತನ್ನ 4 ವರ್ಷದ ಮಗುವನ್ನ ನಾಲ್ಕನೇ ಮಹಡಿಯಿಂದ ನೂಕಿ ಕೊಂದಿದ್ದ ಕೇಸ್‍ನಲ್ಲಿ ಈಗೊಂದು ಟ್ವಿಸ್ಟ್ ಸಿಕ್ತಿದೆ. ಘಟನೆ ಬಗ್ಗೆ ಸಂಪಂಗಿ ರಾಮನಗರ ಪೊಲೀಸರಿಗೆ ಒಂದಷ್ಟು ಅನುಮಾನ ಮೂಡಿದೆ. ಮನೆಯಲ್ಲಿ ಗಂಡ ಸಾಫ್ಟ್‍ವೇರ್ ಇಂಜಿನಿಯರ್, ಹೆಂಡತಿ ಡೆಂಟಲ್ ಡಾಕ್ಟರ್ ಆಗಿದ್ದು, ಆರ್ಥಿಕವಾಗಿ ಎಲ್ಲವಬೂ ಚೆನ್ನಾಗಿಯೇ ಇತ್ತು. ಇವರ 4 ವರ್ಷದ ಹೆಣ್ಣು ಮಗುವನ್ನು ನೋಡಿದ್ದ ಅಕ್ಕಪಕ್ಕದವರಿಗೂ ಮಗು ಬುದ್ಧಿಮಾಂದ್ಯ ಅನ್ನೋ ರೀತಿ ಯಾವುದೇ ಅನುಮಾನ ಕೂಡ ಇರಲಿಲ್ಲ. ಆದರೂ ಮಗುವನ್ನು ಆಟವಾಡಿಸುತ್ತಿದ್ದ ವೈದ್ಯೆ ಸುಷ್ಮಾ ಏಕಾಏಕಿ ಮಗುವನ್ನು ಕೆಳಗೆ ಎಸೆದಿದ್ದು ಯಾಕೆ..? ಕೆಳಗೆ ಬಿದ್ದ ಮಗು ನರಳಾಡಿ ಸಾವನ್ನಪ್ಪುತ್ತಿದ್ದರೂ ಅರಾಮಾಗಿ ನಿಂತು ನೋಡ್ತಿದ್ದು ಯಾಕೆ ಅನ್ನೋ ಅನುಮಾನ ಕಾಡಿದೆ. ಅದರ ಜೊತೆಗೆ ತಾನು ಕೂಡ ಕಂಬಿ ಮೇಲೆ ನಿಂತು ಎರಡು ನಿಮಿಷಗಳ ಕಾಲ ಕಾದಿದ್ದು ಯಾಕೆ ಅನ್ನೋ ಬಿಗ್ ಡೌಟ್ ಪೊಲೀಸರನ್ನು ಕಾಡುತ್ತಿದೆ.

ಅಪಾರ್ಟ್ ಮೆಂಟ್‍ನಲ್ಲಿ ನಾಲ್ಕು ವರ್ಷದ ಮಗು ಜೊತೆಗೆ ಗಂಡ-ಹೆಂಡತಿ ಮೂವರೇ ಇದ್ದರು. ಒಂದು ವೇಳೆ ತಮ್ಮ ಮಗುಗೆ ಅಬ್ ನಾರ್ಮಲ್ ಆಗಿದ್ರೆ ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಬಹುದಿತ್ತು. ಆದರೆ ಅದನ್ನು ಬಿಟ್ಟು ಗಂಡ ಕೆಲಸಕ್ಕೆ ಹೋಗಿದ್ದ ವೇಳೆ ತನ್ನ ಮಗುವನ್ನೇ ಕೊಂದ ವೈದ್ಯೆ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದರ ಹಿಂದೆ ವೈಯಕ್ತಿಕ ಕಾರಣವಿರುವ ಸಾಧ್ಯತೆ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ. ಹೀಗಾಗಿ ಕೇಸ್ ಸಂಬಂಧ ಆರೋಪಿ ಸುಷ್ಮಾ, ಗಂಡ ಕಿರಣ್, ಅಕ್ಕಪಕ್ಕದವರ ಬಳಿ ಮಾಹಿತಿ ಕಲೆಹಾಕಿರುವ ಪೊಲೀಸರಿಗೆ, ಘಟನೆಯಲ್ಲಿ ವೈಯಕ್ತಿಕ ಕಾರಣ ಇರೋ ಸಾಧ್ಯತೆ ಬಗ್ಗೆ ಒಂದಷ್ಟು ಸಾಕ್ಷಿಗಳು ಸಿಕ್ಕಿದೆ ಎನ್ನಲಾಗಿದೆ.

ಇನ್ನೂ ಘಟನೆ ಬಗ್ಗೆ ಗಂಡ ಕಿರಣ್ ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪಾಪಿ ತಾಯಿ ಸುಷ್ಮಾ ಪೊಲೀಸರ ವಶದಲ್ಲಿದ್ದಾರೆ. ವಿಚಾರಣೆ ವೇಳೆ ಆಕೆ ಸೂಕ್ತ ರೀತಿಯಲ್ಲಿ ಉತ್ತರ ನೀಡ್ತಿಲ್ಲ. ಹೀಗಾಗಿ ಸಂಬಂಧಪಟ್ಟ ವೈದ್ಯರಿಂದ ಕೌನ್ಸಲಿಂಗ್ ಮಾಡಿಸೋಕೆ ಖಾಕಿ ಪಡೆ ಮುಂದಾಗಿದೆ. ಅದೇನಿ ಇರಲಿ, ಸ್ವಂತ ಮಗುವಿನ ಮೇಲೆ ತಾಯಿಯೇ ಈ ರೀತಿ ಭೀಕರತೆ ಮೆರೆದಿರೋದು ದುರಂತ.

ಹೆಂಡತಿ ಹೋಲಿಕೆ ಇರುವ ‘ನೀಲಿ ಚಿತ್ರ’ ನೋಡಿದ ಗಂಡ: ಆಕೆ ತನ್ನ ಹೆಂಡತಿಯೇ ಎಂದು ಇರಿದು ಕೊಂದ!

Leave a Reply

Your email address will not be published.