ಹೆಂಡತಿ ಜಗಳ ಆಡಿ ತವರಿಗೆ ತೆರಳಿದ್ದಾಳೆ ಸಮಾಧಾನಿಸಿ ಅವಳನ್ನು ವಾಪಾಸು ಕರೆತರಬೇಕಿದೆ ನನಗೆ ಎರಡು ದಿನಗಳ ರಜೆ ನೀಡಿ.

ಕಾನ್ಪುರದ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕ್ಲರ್ಕ್​ ತನ್ನ ಮೇಲಧಿಕಾರಿಗೆ ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕ್ಲರ್ಕ್​ನ ಪ್ರಾಮಾಣಿಕತನಕ್ಕೆ ಅಧಿಕಾರಿಯು ಮನಸೋತು ರಜೆ ನೀಡಿದ್ದನ್ನು ಇಂಡಿಯಾ ಟುಡೇ ವರದಿ ಮಾಡಿದೆ. ಪ್ರಾಮಾಣಿಕತೆ ಇದ್ದಲ್ಲಿ ದಿಟ್ಟತೆ ಇರುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಕ್ಲರ್ಕ್ ಶಂಸಾದ್ ಅಹಮ್ಮದ್ ಪ್ರೇಮ್​ ನಗರ ಬ್ಲಾಕ್​ ಡೆವಲಪ್​ಮೆಂಟ್​ ಆಫೀಸರ್​ ಅವರಿಗೆ ತನಗೆ ತುರ್ತಾಗಿ ಎರಡು ದಿನಗಳ ರಜೆ ಬೇಕೆಂದು ಪತ್ರ ಬರೆದಿದ್ದಾರೆ. ಅವರು ರಜೆಯ ಕಾರಣವನ್ನು ವಿವರಿಸಿದ ರೀತಿಯೇ ಅತ್ಯಂತ ಹೃದಯಸ್ಪರ್ಶಿಯಾಗಿದೆ. ಅಧಿಕಾರಿ ರಜೆ ಕೊಡದೇ ಬೇರೆ ದಾರಿಯೇ ಇರಲಿಲ್ಲ. ಏನಿತ್ತು ಅಂಥ ಕಾರಣ ಅದರಲ್ಲಿ?

ಹೆಂಡತಿ ಹೋಲಿಕೆ ಇರುವ ‘ನೀಲಿ ಚಿತ್ರ’ ನೋಡಿದ ಗಂಡ: ಆಕೆ ತನ್ನ ಹೆಂಡತಿಯೇ ಎಂದು ಇರಿದು ಕೊಂದ!

‘ತನ್ನ ಪತ್ನಿ ಜಗಳವಾಡಿಕೊಂಡು ಮಕ್ಕಳೊಂದಿಗೆ ತವರಿಗೆ ತೆರಳಿದ್ದಾಳೆ. ಇದು ಪ್ರೀತಿ ಪ್ರೇಮಕ್ಕೆ ಸಂಬಂಧಿಸಿದ ವಿಷಯ. ನನಗೆ ಬಹಳ ನೋವಾಗಿದೆ. ಪರಸ್ಪರ ಮಾತನಾಡಿಕೊಂಡು ಅವಳನ್ನು ಮನವೊಲಿಸಿ ವಾಪಾಸು ಕರೆತರಬೇಕಿದೆ. ಹಾಗಾಗಿ ನನಗೆ ಎರಡು ದಿನಗಳ ರಜೆಯನ್ನು ಮಂಜೂರು ಮಾಡಿ’ ಎಂದು ರಜಾಪತ್ರದಲ್ಲಿ ಶಂಸಾದ್ ತಮ್ಮ ಮೇಲಧಿಕಾರಿಯನ್ನು ವಿನಂತಿಸಿಕೊಂಡಿದ್ದಾರೆ.

ಶಂಸಾದರ ಮನವಿ ಸೂಕ್ಷ್ಮತೆಯುಳ್ಳ ಅಧಿಕಾರಿಗೆ ತಲುಪಿದ್ದು ಅದೃಷ್ಟವೆಂದೇ ಹೇಳಬೇಕು. ಅವರು ತಕ್ಷಣವೇ ರಜೆ ನೀಡಿದ್ದಾರೆ. ಇನ್ನು ಶಂಸಾದ ಪ್ಯಾರ್ ಮೊಹಬ್ಬತ್​ ಕೀ ಬಾತ್​ ಅನ್ನು ಸಮಾಧಾನದಿಂದ ಪರಿಹರಿಸಿಕೊಳ್ಳಲು ಹೆಂಡತಿಯ ತವರಿಗೆ ತೆರಳಬಹುದೇನೋ.

 

Leave a Reply

Your email address will not be published.