ಸಿಎಂ ಬೊಮ್ಮಾಯಿ ಮೂಕ ಬಸವಣ್ಣ : ಪ್ರಿಯಾಂಕ್‌ ಖರ್ಗೆ

ಕಲಬುರಗಿ(ಏ.06):  ರಾಜ್ಯದಲ್ಲಿ ಸರ್ಕಾರ ಸತ್ತುಹೋಗಿದೆ. ಸಿಎಂ ಬಸಣ್ಣ  ಮೂಕ ಬಸವಣ್ಣ ಆಗಿದ್ದಾರೆ. ಹಾಗಾಗಿ, ಭಜರಂಗದಳ ಸರ್ಕಾರಕ್ಕೆ ನಿರ್ದೇಶನ ನೀಡುತ್ತಿದೆ. ಇವರನ್ನು ಯಾರಿಂದಲೂ ನಿಯಂತ್ರಿಸಲಾಗುತ್ತಿಲ್ಲವೇಕೆ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.

ಕಲಬುರಗಿ ಸಂಚಾರದಲ್ಲಿರುವ ಪ್ರಿಯಾಂಕ್‌ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್‌ ಹಲಾಲ್‌ ಹಾಗೂ ಮಸೀದಿಗಳ ಮೇಲಿನ ಮೈಕ್‌ ತೆಗೆಸುವ ವಿವಾದಗಳು ಹೀಗೆಲ್ಲಾ ಅಡ್ಡಾದಿಡ್ಡಿ ಬೆಳೆಯೋದು ನೋಡಿದ್ರೆ ಸರ್ಕಾರ ಸತ್ತೋಗಿದೆ, ಬಸಣ್ಣ (ಸಿಎಂ) ಮೂಕ ಬಸವಣ್ಣ ಆಗಿದ್ದಾರೆಂದೇ ಹೇಳುವ ಅನಿವಾರ್ಯತೆ ನಮ್ಮ ಮುಂದಿದೆ ಎಂದರು.

ಹಿಜಾಬ್‌, ಹಲಾಲ್‌ ನಂತರ ಈಗ ಮಸೀದಿಗಳ ಮೇಲಿನ ಮೈಕ್‌ಗಳ ತೆರವಿಗೆ ಹಿಂದೂ ಸಂಘಗಳು ಒತ್ತಾಯಿಸುತ್ತಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಮಸೀದಿಗಳ ಮೇಲಿನ ಮೈಕ್‌ ಬಳಕೆಗೆ ವಾಯುವ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸುಪ್ರಿಂಕೋರ್ಟ್‌ ಕೆಲವೊಂದು ನಿಯಮಗಳನ್ನು ರೂಪಿಸಿದೆ. ಇದು ಮಂದಿರ ಹಾಗೂ ಚರ್ಚ್‌ಗಳಿಗೂ ಕೂಡಾ ಅನ್ವಯಿಸುತ್ತದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಸರ್ಕಾರ ಜಾರಿಗೆ ತರಲಿ ಎಂದರು…

Leave a Reply

Your email address will not be published.