ಆರ್ಸಿಬಿ ಹೊಸ ನಾಯಕನಾಗಿ ತಂಡದ ಡು ಪ್ಲೆಸಿಸ್ ಆಯ್ಕೆ

ಬೆಂಗಳೂರು: 15ನೇ ಆವೃತ್ತಿ ಐಪಿಎಲ್‍ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕನ್ನಾಗಿ ಸೌತ್ ಆಫ್ರಿಕಾದ ಆಟಗಾರ ಫಾಫ್ ಡು ಪ್ಲೆಸಿಸ್‍ನ್ನು ಫ್ರಾಂಚೈಸ್ ನೇಮಕ ಮಾಡಿದೆ.

14ನೇ ಆವೃತ್ತಿ ಐಪಿಎಲ್ ಬಳಿಕ ಆರ್​ಸಿಬಿ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದರು. ಆ ಬಳಿಕ ಇದೀಗ ಆರ್​ಸಿಬಿ ಫ್ರಾಂಚೈಸ್ ಡು ಫ್ಲೆಸಿಸ್‍ನ್ನು ನಾಯಕನ್ನಾಗಿ ನೇಮಿಸಿ ಇಂದು ಅಧಿಕೃತವಾಗಿ ತಿಳಿಸಿದೆ

ಪ್ಲೆಸಿಸ್ ಈ ಹಿಂದಿನ ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರರಾಗಿದ್ದರು. ಆದರೆ ಆಟಗಾರರ ಮೆಗಾ ಹರಾಜಿನಲ್ಲಿ ಚೆನ್ನೈ ತಂಡ ಪ್ಲೆಸಿಸ್‍ರನ್ನು ಹರಾಜಿಗೆ ಬಿಟ್ಟು ಕೊಟ್ಟಿತ್ತು. ಆರ್​ಸಿಬಿ ತಂಡ ಹರಾಜಿನಲ್ಲಿ 7 ಕೋಟಿ ರೂ. ನೀಡಿ ಪ್ಲೆಸಿಸ್‍ರನ್ನು ಖರೀದಿಸಿತ್ತು. ಆ ಬಳಿಕ ಇದೀಗ ನಾಯಕನ ಪಟ್ಟ ಕಟ್ಟಿದೆ.

ಪ್ಲೆಸಿಸ್ ಸೌತ್ ಆಫ್ರಿಕಾ ತಂಡವನ್ನು ಒಟ್ಟು 115 ಪಂದ್ಯಗಳಲ್ಲಿ ಮುನ್ನಡೆಸಿ 81 ಬಾರಿ ಗೆಲ್ಲಿಸಿದ್ದಾರೆ. 40 ಟಿ20 ಪಂದ್ಯಗಳಲ್ಲಿ 25 ಪಂದ್ಯ ಗೆದ್ದಿರುವ ರೆಕಾರ್ಡ್ ಪ್ಲೆಸಿಸ್ ನಾಯಕತ್ವದಲ್ಲಿದೆ. ಇದೀಗ ಆರ್​ಸಿಬಿ ಕೊಹ್ಲಿ ಬಳಿಕ ಪ್ಲೆಸಿಸ್‍ರನ್ನು ನಾಯಕನ್ನಾಗಿ ಆಯ್ಕೆ ಮಾಡಿದೆ. ಈವರೆಗಿನ 14 ಆವೃತ್ತಿಗಳಲ್ಲಿ ಒಮ್ಮೆಯೂ ಕಪ್ ಗೆಲ್ಲಲು ಸಫಲವಾಗದ ಆರ್​ಸಿಬಿ ಈ ಬಾರಿ ಪ್ಲೆಸಿಸ್ ನಾಯಕತ್ವದಲ್ಲಿ ಕಪ್ ಗೆಲ್ಲಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

Leave a Reply

Your email address will not be published. Required fields are marked *