ಪುನೀತ್ ರಾಜ್‌ಕುಮಾರ್ ಫೋಟೋ ಇಟ್ಟು ಸೀಗೆ ಹುಣ್ಣಿಮೆ ದಿನ ಹೊಲದ ಪೂಜೆ ಮಾಡಿದ ರೈತ

ಧಾರವಾಡ: ಸೀಗೆ ಹುಣ್ಣಿಮೆ ಬಂದರೆ ಸಾಕು ರೈತರ ಕುಟುಂಬ ಎಲ್ಲ ಹೊಲಕ್ಕೆ ಹೋಗಿ ಹೊಲಕ್ಕೆ ಪೂಜೆ ಮಾಡಿ ನಮಿಸುತ್ತಾರೆ. ಅದೇ ರೀತಿ ಇಂದು ಸೀಗೆ ಹುಣ್ಣಿಮೆ ಇರುವ ಕಾರಣ ಧಾರವಾಡ  ಜಿಲ್ಲೆಯ ಅಣ್ಣಿಗೇರಿ ತಾಲೂಕಿ ರೈತರೊಬ್ಬರು ಪುನೀತ್ ರಾಜ್‌ಕುಮಾರ್   ಭಾವಚಿತ್ರ ಇಟ್ಟು ಹೊಲದಲ್ಲಿ ಪೂಜೆ ಮಾಡಿದ್ದಾರೆ.

ಅಣ್ಣಿಗೇರಿ ಪಟ್ಟಣದ ಅಶೋಕ್ ಕುರಿ ಸೀಗೆ ಹುಣ್ಣಿಮೆ ಹಿನ್ನೆಲೆ ಪುನೀತ್ ರಾಜ್‍ಕುಮಾರ್ ಭಾವಚಿತ್ರ ಇಟ್ಟು ಹೊಲಕ್ಕೆ ಪೂಜೆ ಮಾಡಿದ್ದಾರೆ. ಅಶೋಕ್ ಕುರಿ ಅವರ ಹೊಲದಲ್ಲಿ ಇರುವ ಬನ್ನಿ ಮರದ ಕಳಗೆ ಉತ್ತರದ ಕರ್ನಾಟಕ ಶೈಲಿಯ ಅಡುಗೆ ಮಾಡಿ ಎಡೆ ಇಟ್ಟು ಅದರ ನಡುವೆ ಪುನೀತ್ ಭಾವಚಿತ್ರ ಇಟ್ಟು ಪೂಜಿಸಿದ್ದಾರೆ.

 

Leave a Reply

Your email address will not be published. Required fields are marked *