SIIMA 2024: ಅತ್ಯುತ್ತಮ ನಟ ಲಿಸ್ಟ್​ನಲ್ಲಿ ದರ್ಶನ್,ಅತ್ಯುತ್ತಮ ಸಿನಿಮಾ ರೇಸ್​ನ​ಲ್ಲಿ ಕಾಟೇರ-ಕ್ರಾಂತಿ

2024ನೇ ಸಾಲಿನ ಸೈಮಾ ಅವಾರ್ಡ್ಸ್​ನ ನಾಮಿನೇಷನ್ ಪಟ್ಟಿ ಹೊರ ಬಿದ್ದಿದೆ. ‘ಕಾಟೇರ’ ಎಂಟು ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ’ ಸಿನಿಮಾ ಏಳು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಈ ಬಾರಿ ಸೈಮಾ ಅವಾರ್ಡ್ ಕಾರ್ಯಕ್ರಮ ಸೆಪ್ಟೆಂಬರ್ 14 ಹಾಗೂ 15ರಂದು ದುಬೈನಲ್ಲಿ ನಡೆಯಲಿದೆ.

2024ನೇ ಸಾಲಿನ ಸೈಮಾ (SIIMA 2024) ಅವಾರ್ಡ್ಸ್​ನ ನಾಮಿನೇಷನ್ ಪಟ್ಟಿ ಹೊರ ಬಿದ್ದಿದೆ. 2023ರಲ್ಲಿ ರಿಲೀಸ್ ಆದ ಸಿನಿಮಾಗಳು ಈ ಬಾರಿ ಸ್ಪರ್ಧೆಯಲ್ಲಿ ಇವೆ. ದಕ್ಷಿಣ ಭಾರತದ ಸಿನಿಮಾಗಳಿಗಾಗಿ ವಿಶೇಷವಾಗಿ ಆರಂಭಿಸಿದ ಅವಾರ್ಡ್ ಕಾರ್ಯಕ್ರಮ ಇದಾಗಿದೆ. ಈ ಬಾರಿ ಸೈಮಾ ನಾಮಿನೇಷನ್​ನಲ್ಲಿ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಹಲವು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಸದ್ಯ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಸಿನಿಮಾಗಳ ಪಟ್ಟಿಯನ್ನು ಮಾತ್ರ ಸೈಮಾದವರು ರಿಲೀಸ್ ಮಾಡಿದ್ದಾರೆ. ‘ಕಾಟೇರ’ ಎಂಟು ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ’ ಸಿನಿಮಾ ಏಳು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.

ಅತ್ಯುತ್ತಮ ನಟ

  • ದರ್ಶನ್- ಕಾಟೇರ

  • ಧನಂಜಯ- ಗುರುದೇವ ಹೊಯ್ಸಳ

  • ರಾಜ್ ಬಿ ಶೆಟ್ಟಿ-ಟೋಬಿ

  • ರಮೇಶ್ ಅರವಿಂದ್- ಶಿವಾಜಿ ಸುರತ್ಕಲ್ 2

  • ರಕ್ಷಿತ್ ಶೆಟ್ಟಿ- ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ

  • ಶಿವರಾಜ್​ಕುಮಾರ್- ಘೋಸ್ಟ್

ಅತ್ಯುತ್ತಮ ಸಿನಿಮಾ

  • ಆಚಾರ್ ಆ್ಯಂಡ್ ಕೋ

  • ಕಾಟೇರ

  • ಕೌಸಲ್ಯ ಸುಪ್ರಜಾ ರಾಮ

  • ಕ್ರಾಂತಿ

  • ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ

ಅವಾರ್ಡ್ ಎಲ್ಲಿ?

ಈ ಬಾರಿ ಸೈಮಾ ಅವಾರ್ಡ್ ಕಾರ್ಯಕ್ರಮ ಸೆಪ್ಟೆಂಬರ್ 14 ಹಾಗೂ 15ರಂದು ದುಬೈನಲ್ಲಿ ನಡೆಯಲಿದೆ. ದುಬೈನ ವರ್ಲ್ಡ್ ಟ್ರೇಡ್ ಸೆಂಟರ್​ನಲ್ಲಿ ಕಾರ್ಯಕ್ರಮ ಜರುಗಲಿದೆ. ಕನ್ನಡದ ಬಹುತೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಲಿದ್ದಾರೆ. ಅದೇ ರೀತಿ ತಮಿಳು, ಮಲಯಾಳಂ ಹಾಗೂ ತೆಲುಗು ಇಂಡಸ್ಟ್ರಿಯವರು ಕೂಡ ಬರಲಿದ್ದಾರೆ.

Leave a Reply

Your email address will not be published. Required fields are marked *