ಚನ್ನಗಿರಿ ರಾಜಕೀಯದಲ್ಲಿ ಧಿಡೀರ್ ಬೆಳವಣಿಗೆ ? ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಬಿಜೆಪಿ ಸೇರುವ ಲಕ್ಷಣ.

ಚನ್ನಗಿರಿ : ಹಾಲಿ ಶಾಸಕ ಮಾಡಳ ವಿರುಪಾಕ್ಷಪ್ಪ ಹಾಗೂ ಪುತ್ರ ಪ್ರವೀಣ್ ಲೋಕಾಯುಕ್ತ ರೈಡ್ ಆದಮೇಲೆ ಚನ್ನಗಿರಿ ರಾಜಕೀಯದಲ್ಲಿ ಹಲವು ಧಿಡೀರ್ ಬೆಳವಣಿಗೆಗಳು ನಡೆಯುತ್ತ ಬಂದಿದೆ ಅದೇ ರೀತಿ ಕಳೆದ ಎರಡು ದಿನಗಳಿಂದ ಓರ್ವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಟಿಕೆಟ್ ವಂಚಿತನಾಗುವ ಚಿಂತೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಿಜೆಪಿ ಗೆ ಬರುವ ಮುನ್ಸೂಚನೆ ನೀಡಿದ್ದಾರೆ ಇದಕ್ಕೆ ಪುಷ್ಟಿಯಾಗಿ ಮಾರ್ಚ್ 11 ರಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್
ದಾವಣಗೆರೆ ಹಾಗೂ ಹರಿಹರಕ್ಕೆ ಬಂದಾಗ ಅವರನ್ನು ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಬೇಟಿಯಾಗಿ ಬಂದ ಗುಪ್ತ ಸಭೆ ನಡೆಸಿದ್ದರೆ ಎನ್ನಲಾಗಿದೆ ಜೊತೆಗೆ ಬಿಜೆಪಿಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ ಅದಕ್ಕೆ ಬಿ.ಎಲ್.ಸಂತೋಷ್ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ .

ಕಾಂಗ್ರೆಸ್ ಟಿಕೆಟ್ ಗಾಗಿ 5 ಜನ ಆಕಾಂಕ್ಷಿಗಳು

ಕಾಂಗ್ರೆಸ್ ಪಕ್ಷಕ್ಕೆ ಐದು ಜನ ಆಕಾಂಕ್ಷಿಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ ಅದರಲ್ಲಿ ಮಾಜಿ ಶಾಸಕ ವಡ್ನಳ ರಾಜಣ್ಣ ವಯಸ್ಸು ಹಾಗೂ ಇತರೆ ಕಾರಣಗಳಿಂದ ಚುನಾವಣೆಗೆ ಸ್ಪರ್ಧೆ ಮಾಡದೆ ಇದ್ದರೆ ವಡ್ನಾಳ್ ಜಗದೀಶ್ ಶಿವಗಂಗಾ ಬಸವರಾಜ್ ಹಾಗೂ ವಡ್ನಾಳ್ ಅಶೋಕ್ ರವರು ಸ್ಪರ್ಧೆಯಲ್ಲಿದ್ದಾರೆ

ಹೊಸ ಮುಖ ಸಂತೇಬೆನ್ನೂರು ಲಿಂಗರಾಜ್

ಕಾಂಗ್ರೆಸ್ ಪಕ್ಷದಿಂದ ಹೊಸ ಮುಖ ಸಂತೇಬೆನ್ನೂರು ಲಿಂಗರಾಜ್ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ ಸಂತೇಬೆನ್ನೂರು ಲಿಂಗರಾಜ್ ಅವರು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಹಾಗೂ ಕಾಂಗ್ರೆಸ್ ಹೈ ಕಮಾಂಡ್ ಜೊತೆಗೆ ಒಳ್ಳೆಯ ಸಂಬಂಧವಿದೆ,ಕಾಂಗ್ರೆಸ್ ಹೈ ಕಮಾಂಡ್ ಹೊಸ ಮುಖಕ್ಕೆ ಮನೆ ಹಾಕಿದ್ರೆ ಸಂತೇಬೆನ್ನೂರು ಲಿಂಗರಾಜ್ ಹೆಸರು ಬಹುತೇಕ ಅಂತಿಮವಾಗಬಹುದು .
*

ಶಿವಗಂಗಾ ಬಸವರಾಜ್ ಹೆಸರು ಬಹುತೇಕ ಅಂತಿಮ

ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಶಿವಗಂಗಾ ಬಸವರಾಜ್ ಅವರಿಗೆ ಬಹುತೇಕ ಅಂತಿಮ ಎಂದು ಹೇಳಲಾಗುತ್ತಿದೆ , ಕಾಂಗ್ರೆಸ್ ಹೈ ಕಮಾಂಡ್ ಜೊತೆ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಅತ್ಯಾಪ್ತ ಆಗಿರುವುದರಿಂದ ಟಿಕೆಟ್ ಸಿಗುವ ಸಂಭವ ಇದೆ.

*ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಡ್ನಾಳ್ ಅಶೋಕ್ ಗೇ ಬಿಜೆಪಿ ಗಾಳ.ಬಿಜೆಪಿ ಸೇರುತ್ತಾರ ಅಶೋಕ್*
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದ ವಡ್ನಾಳ್ ಅಶೋಕ್ ರವರು ಟಿಕೆಟ್ ಕೈ ತಪ್ಪುವ ಭೀತಿಯಲ್ಲಿ ಈಗ ಬಿಜೆಪಿ ಪಕ್ಷ ಸೇರುವ ಯೋಜನೆಯಲ್ಲಿದ್ದಾರೆ ಎಂದು ಅಶೋಕ್ ರವರ ಆಪ್ತ ವಲಯದಲ್ಲಿ ಮಾತುಕತೆ ಜೋರಾಗಿದೆ.
ಹೈಕಮಾಂಡ್ ನಿಂದ ತುಂಕೋಸ್ ಶಿವಕುಮಾರ್ ಗೆ ಕ್ಷೇತ್ರ ಸುತ್ತುವಂತೆ ಸೂಚನೆ ಬಂದಿದೆ ಎಂದು ಹೇಳಲಾಗಿದೆ ಅದಕ್ಕೆ ಸರಿಯಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಚನಾಗಿರಿ ಕ್ಷೇತ್ರದಲ್ಲಿ ಶಿವಕುಮಾರ್ ಸಂಚಾರ ಮಾಡಿ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ .

ಹಾಲಿ ಶಾಸಕರ ಮಗನ ಬಗ್ಗೆ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಅಭ್ಯರ್ಥಿಗಳ ಹುಡುಕಾಟದಲ್ಲಿದೆ ಅದಕ್ಕಾಗಿ 2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಇದೆ ಕ್ಷೇತ್ರದಲ್ಲಿ ಸ್ಪರ್ಧಿಸಿ ದಂತಹ ಶಿವಕುಮಾರ್ ರವರಿಗೆ ಕ್ಷೇತ್ರ ಸುತ್ತಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ತಿಳಿಸಲಾಗಿದೆ.

ಶಿವಕುಮಾರ್ ಗೆ ಜನ ಬೆಂಬಲ ಇಲ್ಲ

ಮಾಡಲ್ ವಿರುಪಾಕ್ಷಪ್ಪ ಹಾಗೂ ಪುತ್ರ ಮಲ್ಲಿಕಾರ್ಜುನ ಅವರಿಗೆ ಇರುವ ಜನ ಬೆಂಬಲ ಶಿವಕುಮಾರ್ ಅವರಿಗೆ ಬಹುತೇಕ ಇಲ್ಲ ಒಂದುವೇಳೆ ಬಿಜೆಪಿ ಅಭ್ಯರ್ಥಿ ಆಗಿ ಶಿವಕುಮಾರ್ ನಿಂತಿದ್ದೆ ಆದ್ರೆ ಬಿಜೆಪಿ ಕ್ಷೇತ್ರ ಕಳೆದುಕೊಳ್ಳುವುದು ಗ್ಯಾರಂಟಿ ಎನುತ್ತಿದಾರೆ ಕ್ಷೇತ್ರದ ಜನ

Leave a Reply

Your email address will not be published. Required fields are marked *