ಚಂದ್ರು ಎಲ್ಲಿದಿಯಾ ಬಾ ಮಗನೇ …! ಕಣ್ಣೀರಿಟ್ಟ ಶಾಸಕ ಎಂ. ಪಿ.ರೇಣುಕಾಚಾರ್ಯ

ದಾವಣಗೆರೆ:ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ. ರೇಣುಕಾಚಾರ್ಯ ರ ಸಹೋದರನ ಮಗ ನಾಪತ್ತೆಯಾಗಿದ್ದು, ಭಾರೀ ಅನುಮಾನ ಹುಟ್ಟಿದೆ.ರೇಣುಕಾಚಾರ್ಯರ ಸಹೋದರನ ಮಗ ಚಂದ್ರು ಅಲಿಯಾಸ್ ಚಂದ್ರಶೇಖರ್  ನಾಪತ್ತೆಯಾದವರು. ಇದರಿಂದ ಇಡೀ ಕುಟುಂಬಕ್ಕೆ ಆಘಾತವಾಗಿದ್ದು, ಅಣ್ಣನ ಮಗನ ಹುಡುಕಾಟದಲ್ಲಿ ಶಾಸಕ ರೇಣುಕಾಚಾರ್ಯ ಇದ್ದಾರೆ. ಕಳೆದ ಭಾನುವಾರ ಶಿವಮೊಗ್ಗದ ಗೌರಿಗದ್ದೆಗೆ ತನ್ನ ಹೊಂಡಾಯ್ ಕ್ರೇಟ ಗಾಡಿಯಲ್ಲಿ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು, ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು. ಆದರೆ ಇದ್ದಕ್ಕಿದಂತೆ ಭಾನುವಾರ ನಾಪತ್ತೆಯಾದವರು ಇನ್ನೂ ಪತ್ತೆಯಾಗಿಲ್ಲವಂತೆ. ಹೊನ್ನಾಳಿಯಲ್ಲಿ ನಿನ್ನೆ ಫೋನ್ ಸ್ವಿಚ್ಛ್ ಆಫ್ ಆಗಿದ್ದು, ಕುಟುಂಬಸ್ಥರಲ್ಲಿ ಭಯವನ್ನುಂಟು ಮಾಡಿದೆ. ಫೋನ್ ಸ್ವಿಚ್ಛ್ ಆಫ್ ಆದ ಬಳಿಕ ಅಂದಿನಿಂದ ನಾಪತ್ತೆಯಾಗಿದ್ದು ಇದುವರೆಗೂ ಸಿಕ್ಕಿಲ್ಲವಂತೆ. ಹೊನ್ನಾಳಿ ಪೊಲೀಸರು ಹಾಗೂ ಚಂದ್ರು ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿದ್ದು, ರೇಣುಕಾಚಾರ್ಯ ಅವರ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ. ಇನ್ನು ಶಾಸಕ ರೇಣುಕಾಚಾರ್ಯ ಮಾಧ್ಯಮದವರೊಂದಿಗೆ ಮಾತನಾಡಿ ಚಂದ್ರು ಎಲ್ಲಿದ್ದರೂ ಬೇಗ ಬಾ ಎಂದು ಕೇಳಿಕೊಂಡಿದ್ದಾರೆ .

ತಾರಕಕ್ಕೇರಿದ ಜಾತಿ ಸರ್ಟಿಫಿಕೇಟ್ ವಿವಾದ : ಶಾಸಕ ರೇಣುಕಾಚಾರ್ಯ ಸೋದರನ ವಿರುದ್ಧ ತಿರುಗಿಬಿದ್ದ ದಲಿತ ಸಂಘಟನೆಗಳು!

Leave a Reply

Your email address will not be published. Required fields are marked *