ಇಂದಿನಿಂದ 4 ವರ್ಷಗಳಿಂದ ಸ್ಥಗಿತವಾಗಿದ್ದ ಮೈ ಶುಗರ್‌ ಕಾರ್ಖಾನೆ ಆರಂಭ

ಮಂಡ್ಯ: ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತವಾಗಿದ್ದ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಮಂಡ್ಯದ ಮೈ ಶುಗರ್ ಇಂದಿನಿಂದ ಕಾರ್ಯಾಚರಣೆ ನಡೆಸಲಿದೆ.

2017-18 ನೇ ಸಾಲಿನಲ್ಲಿ ಬಾಯ್ಲರ್, ಟರ್ಬೈನ್ ಸಮಸ್ಯೆ ಸೇರಿದಂತೆ ನೂರಾರು ಕೋಟಿ ರೂಪಾಯಿ ಸಾಲದ ಹೊಣೆಗಾರಿಕೆಯಿಂದ ನಷ್ಟಕ್ಕೆ ಸಿಲುಕಿ ಕಾರ್ಖಾನೆ ಬಂದ್ ಆಗಿತ್ತು. ಇದಾದ ಬಳಿಕ ಸರ್ಕಾರ ಖಾಸಗಿಯವರಿಗೆ ನೀಡಲು ಮುಂದಾಗಿತ್ತು. ಆದರೆ ರೈತರ ಪ್ರತಿಭಟನೆಯಿಂದ ಈ ನಿರ್ಧಾರ ಕೈ ಬಿಟ್ಟಿತು.

ಈಗ ಸರ್ಕಾರ ಮೈ ಶುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ ಸರ್ಕಾರಿ ಸ್ವಾಮ್ಯದಲ್ಲೇ ನಡೆಸಲು ನಿರ್ಧಾರ ಮಾಡಿದೆ. ಈ ಇಂದು ಮೈ ಶುಗರ್ ಕಾರ್ಖಾನೆಯ ಬಾಯ್ಲರ್‌ಗೆ ಸಚಿವರಾದ ಗೋಪಾಲಯ್ಯ, ಶಂಕರ್ ಪಾಟೀಲ್ ಹಾಗೂ ನಾರಾಯಣಗೌಡ ಅಗ್ನಿ ಸ್ಪರ್ಶ ಮಾಡುವ ಮೂಲಕ ನಾಲ್ಕು ವರ್ಷಗಳ ಬಳಿಕ ಮೈ ಶುಗರ್ ಆರಂಭಕ್ಕೆ ಚಾಲನೆ ನೀಡಲಿದ್ದಾರೆ.

ಮೈ ಶುಗರ್ ಕಾರ್ಖಾನೆಯ ಪುನಾರಂಭದ ಸುದ್ದಿ ಕೇಳಿರುವ ಮಂಡ್ಯದ ರೈತರ ಮುಖದಲ್ಲಿ ಸಂತಸ ಮನೆ ಮಾಡಿದೆ.

Leave a Reply

Your email address will not be published. Required fields are marked *