Cinema | ಚನ್ನಗಿರಿಯಲ್ಲಿ ನಾಳೆ ಕ್ರಾಂತಿ ಕಹಳೆ

ಚನ್ನಗಿರಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರಕ್ಕೆ ಅಭಿಮಾನಿಗಳೇ ಪ್ರಚಾರದ ಕೆಲಸವನ್ನು ಪ್ರಾರಂಭಿಸಿದ್ದಾರೆ ಈಗಾಗಲೇ ರಾಜ್ಯದ ಹಲವು ಕಡೆ ವಿಭಿನ್ನ ರೀತಿಯ ಕ್ರಾಂತಿ ಚಿತ್ರಕ್ಕೆ ಪ್ರಚಾರ ಮಾಡುತ್ತಿರುವ ಅಭಿಮಾನಿಗಳು ಇದೀಗ ಚನ್ನಗಿರಿಯಲ್ಲಿ ಕೂಡ ವಿಭಿನ್ನ ರೀತಿಯ ಪ್ರಚಾರ ಕೈಗೊಳಲ್ಲಿದ್ದಾರೆ . ನಮ್ಮ ವರದಿಗಾರ ರೊಂದಿಗೆ ಮಾತನಾಡಿರುವ ಅಭಿಮಾನಿ ಬಳಗದ ಸದಸ್ಯ ನಾಳೆ ಚೊಡಮ್ಮ ದೇವಾಲಯದಿಂದ ಪೂಜೆ ಮಾಡಿ ನಂತರ ಮೆರವಣಿಗೆ ಪ್ರಾರಂಭ ವಾಗುತ್ತೆ ಕೇವಲ ಬೈಕ್ ಅಷ್ಟೇ ಅಲ್ಲದೆ ಎಲ್ಲಾ ವಾಹನಗಳು ಕೂಡ ನಾಳಿನ ರ್ಯಾಲಿಯಲ್ಲಿ ಭಾಗ ವಹಿಸಲಿದೆ , ಬೆಳ್ಳಿ ರಥದಲ್ಲಿ ಕ್ರಾಂತಿ ಚಿತ್ರದ ಪೋಸ್ಟರ್ ಇಟ್ಟು ಪ್ರಚಾರ ಮಾಡುತ್ತೇವೆ ಅದರ ಜೊತೆ 200 ಪೋಸ್ಟರ್ ಹಾಗೂ ಕ್ರಾಂತಿ ಭಾವುಟಗಳನ್ನು ಬಳಸಲಾಗುತ್ತದೆ , ಅಂದಾಜು ಒಟ್ಟು 2500 ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.ಒಟ್ಟಿನಲ್ಲಿ ಕ್ರಾಂತಿ ಸಿನಿಮಾ ಕನ್ನಡದ ಕ್ರಾಂತಿ ಆಗಿದ್ರಲ್ಲಿ ಎರಡು ಮಾತಿಲ್ಲ .

Leave a Reply

Your email address will not be published.