ಆ.1ರಿಂದ ರಾಜ್ಯದಲ್ಲಿ ವೋಟರ್‌ ಐಡಿ ಜೊತೆ ಆಧಾರ್ ನಂಬರ್ ಜೋಡಣೆ ಕಡ್ಡಾಯ

ವಿಧಾನಸಭಾ ಚುನಾವಣೆ ಸೇರಿದಂತೆ ಇತರೆ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು ಆ.1ರಿ೦ದ ಅಗತ್ಯ ಬದಲಾವಣೆಯ ಪ್ರಕ್ರಿಯೆಗಳನ್ನು ಆರಂಭಿಸಲಿದ್ದು, ನಕಲಿ ಮತದಾನದ ತಡೆಗೆ ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಕಾರ್ಯವನ್ನುಗೆ Kತ್ತಿಗೊಳ್ಳಲಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರುವ ಪ್ರಕ್ರಿಯೆಯನ್ನು ಆ.1ರಿ೦ದಪ್ರಾರಂಭಿಸಲಿದ್ದು, ಮಾ.31ರವರೆಗೆ ಪ್ರಕ್ರಿಯೆ ನಡೆಯಲಿದೆ. 18 ವರ್ಷ ಪೂರ್ಣಗೊಂಡ ಬಳಿಕ ಮತದಾರರ ಗುರುತಿನ ಚೀಟಿಗಾಗಿ ಆರ್ಜಿ ಸಲ್ಲಿಕೆ ಮಾಡುವ ಬದಲು 17 ವರ್ಷ ಪೂರೈಸಿದವರಿಗೆ ಅರ್ಜಿ ಸಲ್ಲಿಸಲು ವಕ ಕಲಿಸಲಾಗಿದೆ. 18 ವರ್ಷ ತುಂಬಲು ಆರು ತಿಂಗಳು ಕಡಿಮೆ ಇದರೂ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ. ಇದು ಚುನಾವಣೆಯ ವೇಳೆಗೆ 18 ವರ್ಷ ಆಗಲಿದ್ದು, ಮತದಾನ ಮಾಡಲು ಅನುಕೂಲವಾಗಲಿದೆ ಎಂದು  ಚುನಾವಣಾ ಆಯೋಗವು ತಿಳಿಸಿದೆ. ನಕಲಿ ಮತದಾನ ತಡೆಗೆ ಮತ್ತು ಪತ್ತೆ ಮಾಡಲು ಮತದಾರರ ಗುರುತಿನ ಚೀಟಿಗೆ ಆಧಾರ್‌ ಕಾರ್ಡ್‌ ಲಿಡ್ ಮಾಡಲು ಆಯೋಗವು ಮುಂದಾಗಿದೆ. ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ ದೃಢೀ ಕರಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾರ ರಿಗೆ ಸ್ವಯಂ ಪ್ರೇರಿತ ಅವಕಾಶವಿದೆ. ಒಂದು ವೇಳೆ ಆಧಾರ್‌ ಮಾಹಿತಿ ಒದಗಿಸಲು ಸಾಧ್ಯ. ವಾಗದಿದ್ದರೆ ಮತದಾನದ ವೇಳೆ ಉಪ ಯೋಗಿಸುವ 11 ದಾಖಲೆ ಒದಗಿಸಿ ದೃಢೀ ಕರಿಸಬಹುದಾಗಿದೆ. ಮತದಾರರ ನೋಂದಣ ಗಾಗಿ ಹೊಸ ಸರಳೀಕರಿಸಿದ ಅರ್ಜಿ ನಮೂನೆ ಸಹ ಲಭ್ಯ ವಾಗಲಿವೆ. ಮತದಾರರ ಪಟ್ಟಿಯ ತಿದ್ದುಪಡಿಗಾಗಿ ಹೊಸ ನಮೂನೆ-8 ಲಭ್ಯ ಇದೆ, ಮತದಾರರ ಪಟ್ಟಿಗೆ ಹೆಸರು ಮತ್ತು ಮತದಾರರ ವರ್ಗಾ ವಣೆಗಾಗಿ ನಮೂನೆ- 6ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇದನ್ನು ಪರಿಷ್ಕರಿಸಿ ನಮೂನೆ-6ರಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಸೀಮಿತಗೊಳಿಸಲಾಗಿದೆ ಎಂದು ಹೇಳಿದೆ

Leave a Reply

Your email address will not be published. Required fields are marked *