ಇಂದಿನಿಂದ ಮತ್ತೊಮ್ಮೆ ‘ಈ ಸಲ ಕಪ್ ನಮ್ದೇ’ ಅನ್ನೋದನ್ನ ನಿಜವಾಗಿಸಲು ಹೋರಾಟ ಶುರು.

ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿರುವ #RCB ಗೆ, ಈ ಸಲ ನಿಜಕ್ಕೂ ಚಾಂಪಿಯನ್ ಆಗುವ ಸಾಧ್ಯತೆಯಂತೂ ಇದೆ. ಇವರ ತಂಡದಲ್ಲಿ ಪ್ರತೀವರ್ಷವೂ ಇರುತ್ತಿದ್ದ ಸಮತೋಲನದ ಕೊರತೆ ಈ ಸಲವೂ ಮುಂದುವರಿದಿದೆ. ಆದರೆ, ಈ ವರ್ಷದಿಂದ, ಹತ್ತು ತಂಡಗಳು ಭಾಗವಹಿಸುತ್ತಿರುವುದರಿಂದ, ಎಲ್ಲಾ ತಂಡಗಳಲ್ಲೂ ಒಂದಲ್ಲಾ ಒಂದು ಕೊರತೆ ಇದ್ದೇ ಇದೆ. ಇದು ನಿಜಕ್ಕೂ RCB ಗೂ ಗೆಲ್ಲುವ ಸಾಧ್ಯತೆಯಿದೆ ಎಂದು ವಿಶ್ವಾಸದಿಂದ ಹೇಳುವಂತೆ ಮಾಡಿದೆ. ಆದರೆ, ಇದು ಕೇವಲ RCB ಗೊಂದೇ ಅಲ್ಲ, ಎಲ್ಲಾ ತಂಡಗಳಿಗೂ ಅನ್ವಯ. ಯಾವುದೋ ಒಂದು ತಂಡ ಉಳಿದೆಲ್ಲಾ ತಂಡಗಳಿಗಿಂತ ತುಂಬಾ Strong on Paper ಅಂತ ಅನಸ್ತಾ ಇಲ್ಲ. ಸೋ, ಎಲ್ಲರಿಗೂ ಗೆಲ್ಲುವ ಸಾಧ್ಯತೆಗಳು ಸಮನಾಗಿವೆ.

ನಾಯಕತ್ವದಿಂದಿಳಿದ ಕೊಹ್ಲಿಯವರ ಸೆಲೆಬ್ರೇಶನ್ ನ ಹೆಚ್ಚಾಗಿ ನೋಡುವ ಅವಕಾಶವಿಲ್ಲ. ನಾಯಕತ್ವದಿಂದ ಇಳಿದಿದ್ದರೂ, ಧೋನಿಯವರು ಟಿಪ್ಸ್ ಕೊಡುವುದರಲ್ಲಿ ಹಿಂದುಳಿಯುವುದಿಲ್ಲ. ತಂಡ ಹೇಗೇ ಇದ್ರೂ, ಅಂಬಾನಿಯವರ ಪಡೆ MI ನ್ನು ಯಾರೂ ಲಘುವಾಗಿ ಪರಿಗಣಿಸೋ ತಪ್ಪನ್ನು ಮಾಡೋದಿಲ್ಲ. ಒಟ್ನಲ್ಲಿ ಈ ಸಲದ IPL ಪ್ರತೀಬಾರಿಯಂತೆ ರೋಚಕವಾಗಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಎಲ್ಲ ರೋಚಕತೆಗಳ ನಡುವೆ, ಕಿಂಗ್ ಕೊಹ್ಲಿ 2016ರ ಫಾರ್ಮಿಗೆ ಮರಳಿ, RCB IPL ಚಾಂಪಿಯನ್ ಆದ್ರೆ, ಅದಕ್ಕಿಂತ ಹೆಚ್ಚೇನು ಬೇಕು?

ಬರಹ – ಅಕ್ಷಯ್ ಹೆಗಡೆ

Leave a Reply

Your email address will not be published. Required fields are marked *