ಉಡುಪಿ :
ಬಹು ನಿರೀಕ್ಷಿತ ಹಿಜಾಬ್ ವಿವಾದದ ತೀರ್ಪನ್ನು ರಾಜ್ಯ ಹೈ ಕೋರ್ಟ್ ನೀಡಿದ್ದು ,ಹೈ ಕೋರ್ಟ್ ಆದೇಶದ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರು ಹೈ ಕೋರ್ಟ್ ಆದೇಶವನು ಒಪುತಲ್ಲ
ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆದು ಕ್ಲಾಸ್‌ಗೆ ಹೋಗಲ್ಲ, ನಮಗೆ ಹಿಜಾಬ್ ಮತ್ತು ನಮ್ಮ ಧರ್ಮದ ಸಂಸ್ಕೃತಿ ಮುಖ್ಯ, ಹೈಕೋರ್ಟ್‌ನಿಂದ ನಮಗೆ ನ್ಯಾಯ ಸಿಕ್ಕಿಲ್ಲ. ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ ಎಂದು ಹಿಜಾಬ್ ಪರ ಕೋರ್ಟ್ ಮೆಟ್ಟಿಲೇರಿದ್ದ ಯುವತಿಯರು ಅಸಮಾಧಾನ ಹೊರ ಹಾಕಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಯುವತಿಯರು, ನಾವು ನಮ್ಮ ಪೋಷಕರ ಹಾಗೂ ಲಾಯರ್‌ಗಳ ಜೊತೆ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ನಮಗೆ ಹೈಕೋರ್ಟ್ ಮೇಲೆ ಇದ್ದ ನಂಬಿಕೆ ಹೋಗಿದೆ. ಸುಪ್ರೀಂ ಕೋರ್ಟ್‌ಗಾದ್ರೂ ಹೋಗಿ ನಾವು ನಮ್ಮ ಹಕ್ಕನ್ನು ಪಡೆಯುತ್ತೇವೆ ಎಂದು ಹೇಳಿದರು.
ಹಿಜಾಬ್ ತೀರ್ಪು : ಪರೀಕ್ಷೆ ಧಿಕ್ಕರಿಸಿ ಮನೆಯತ್ತ ಸಾಗಿದ ಮುಸ್ಲಿಂ ವಿದ್ಯಾರ್ಥಿನಿಯರು
ಅಲ್ಲದೆ, ಹೈಕೋರ್ಟ್ ತಪ್ಪು ತೀರ್ಪು ನೀಡಿದೆ, ನಮ್ಮ ಧರ್ಮದಲ್ಲಿ ಹಿಜಾಬ್ ಧಾರಣೆ ಕಡ್ಡಾಯವಾಗಿದೆ. ಆದ್ರೆ, ನಮ್ಮ ಸಂಸ್ಕೃತಿಯಲ್ಲಿ ಹಿಜಾಬ್ ಧರಿಸುವುದು ಕಡ್ಡಾಯವಿಲ್ಲ ಎಂಬ ಮಾತನ್ನು ಹೈಕೋರ್ಟ್ ಹೇಳಿದೆ. ಇದು ಸರಿಯಾದ ನಿರ್ಧಾರವಲ್ಲ ಎಂದ ಯುವತಿಯರು ತಿಳಿಸಿದರು.
ಹಿಜಾಬ್ ತೀರ್ಪು : ಪರೀಕ್ಷೆ ಧಿಕ್ಕರಿಸಿ ಮನೆಯತ್ತ ಸಾಗಿದ ಮುಸ್ಲಿಂ ವಿದ್ಯಾರ್ಥಿನಿಯರು
