Siddramaiha CM- ಸಿದ್ದರಾಮಯ್ಯ ಬೆಂಬಲಿಗರ ಪೋಸ್ಟ್ ವೈರಲ್: “ಗೌರವಯುತ ರಾಜೀನಾಮೆ ನಿಜವಾದ ರಾಜಕಾರಣ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಮಾಜಿ ಮುಖ್ಯಮಂತ್ರಿ Siddaramaiah ಅವರಿಗೆ ಬೆಂಬಲ ಸೂಚಿಸಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ವಿಧಾನಸೌಧದತ್ತ ಸಾಗುತ್ತಿರುವ ಸಿದ್ದರಾಮಯ್ಯ ಅವರ ಫೋಟೋವನ್ನು ಹಂಚಿಕೊಂಡಿರುವ ಬೆಂಬಲಿಗರು, “ಬೀದಿಯಲ್ಲಿ ರಾತ್ರೋರಾತ್ರಿ ರಾಜಕಾರಣ ಮಾಡುವುದಲ್ಲ, ನಾಯಕತ್ವದ ಬಿಕ್ಕಟ್ಟುಗಳನ್ನೂ ಗೌರವದಿಂದ ಎದುರಿಸುವುದೇ ನಿಜವಾದ ರಾಜಕಾರಣ” ಎಂದು ಬರೆದು ಭಾವನಾತ್ಮಕವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

“ಯಾವುದೇ ಗೊಂದಲ ಸೃಷ್ಟಿಸದೆ, ಯಾವುದೇ ಬಂಡಾಯ ಎಬ್ಬಿಸದೆ, ಅತ್ಯಂತ ಪ್ರಾಮಾಣಿಕವಾಗಿ ಮತ್ತು ಗೌರವಯುತವಾಗಿ ರಾಜೀನಾಮೆ ನೀಡಿರುವುದು ರಾಜಕೀಯ ಪ್ರೌಢಿಮೆಯ ಸಂಕೇತ” ಎಂಬ ಅಭಿಪ್ರಾಯಗಳು ಪೋಸ್ಟ್‌ನಲ್ಲಿ ವ್ಯಕ್ತವಾಗಿವೆ.

ಇದೇ ವೇಳೆ ಸಿದ್ದರಾಮಯ್ಯ ಅವರನ್ನು “ನಿಷ್ಕಲ್ಮಷ ಕರ್ಮಯೋಗಿ”, “ಸಾಮಾಜಿಕ ನ್ಯಾಯದ ಹೋರಾಟಗಾರ” ಎಂದು ಹೊಗಳಿರುವ ಅಭಿಮಾನಿಗಳು, ಅವರ ರಾಜಕೀಯ ಜೀವನ ಮತ್ತು ಬಡವರ ಪರದ ನಿಲುವನ್ನು ಮೆಚ್ಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್‌ಗಳು ವೈರಲ್ ಆಗುತ್ತಿದ್ದು, ಸಾವಿರಾರು ಬೆಂಬಲಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *