26 ಪಕ್ಷಗಳು
48 ನಾಯಕರು
96 ಗೊಂದಲಗಳು
ಆದ್ರೆ ಉದ್ದೇಶ ಒಂದೇ…. ಮೋದಿಯನ್ನ ಸೋಲಿಸುವುದು….
ಸಣ್ಣಪುಟ್ಟ ಎಡಪಕ್ಷಗಳು ಬಿಡಿ ಅವೆಲ್ಲಾ ಲೆಕ್ಕಕ್ಕಿಲ್ಲ, ಆದ್ರೆ ಸ್ವತಂತ್ರ ಭಾರತದ ನಂತರ ನಾಲ್ಕೈದು ದಶಕಗಳ ಕಾಲ ಅತಿ ದೊಡ್ಡ ಪಕ್ಷವಾಗಿ ದೇಶಾದ್ಯಂತ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಪಕ್ಷ ಕಳೆದ ಎರಡು ದಶಕಗಳಿಂದ ನರೇಂದ್ರ ಮೋದಿಯನ್ನ ಸೋಲಿಸೋಕೆ ಇನ್ನಿಲ್ಲದ ಪ್ರಯತ್ನ ಮಾಡ್ತಾನೆ ಇದೆ, ಇವತ್ತಿಗೂ ಕೂಡ ಅದು ಮುಂದುವರೆದಿದೆ, ಆದ್ರೆ ಸೋಲು ಅನ್ನೋದು ಆ ಮನುಷ್ಯನ ಹತ್ತಿರಕ್ಕೆ ಸುಳಿತಾನೇ ಇಲ್ಲ, ಅನೇಕ ಚುನಾವಣೆಗಳಲ್ಲಿ ಇತಿಹಾಸ ನಿರ್ಮಿಸುತ್ತಿದ್ದ ಕಾಂಗ್ರೆಸ್ ಪಕ್ಷ ಇವತ್ತು ಎರಡಂಕಿಗೆ ಬಂದು ನಿಂತಿದೆ, ಅದಕ್ಕೆ ಕಾರಣ ನರೇಂದ್ರ ಮೋದಿ…
ಯಾವ ವಿಚಾರವನ್ನ ಇಟ್ಟುಕೊಂಡು ಮೋದಿಯನ್ನ ಸೋಲಿಸೋಕೆ ಹೊರಟಿದ್ದಾರೆ ಇವರೆಲ್ಲ? ಹದಿನೈದು ಲಕ್ಷ ಹಾಕ್ತೀನಿ ಅಂತ ಮೋದಿ ಹೇಳಿಲ್ಲ ಅಂತ ಗೊತ್ತು ಆದ್ರೂ ಅದೇ ಪಿಟೀಲು ಕುಯ್ತಾನೆ ಇದಾರೆ, ಎರಡು ಕೋಟಿ ಉದ್ಯೋಗ ಎಲ್ಲಿ ಅಂತ ಕೇಳ್ತಿದಾರೆ ಆದ್ರೆ 2019 ರ ನಂತರ ಭಾರತದಲ್ಲಿ ಆರಂಭವಾದ ಕಾರ್ಖಾನೆಗಳು ಎಷ್ಟು, ಬಂಡವಾಳ ಹೂಡಿಕೆ ಮಾಡಿದ ವಿದೇಶಿ ಕಂಪನಿಗಳು ಎಷ್ಟು ಅವುಗಳಿಂದ ಸೃಷ್ಟಿಯಾದ ಉದ್ಯೋಗಗಳು ಎಷ್ಟು ಅಂತ ಲೆಕ್ಕ ಇಟ್ಕೊಂಡು ಆಮೇಲೆ ಇಷ್ಟು ಕೋಟಿ ಉದ್ಯೋಗ ಸೃಷ್ಟಿ ಆಗಿದೆ ಉಳಿದವು ಎಲ್ಲಿ ಅಂತ ಕೇಳಿದ್ರೆ ಒಂದು ಅರ್ಥ ಇರುತ್ತೆ, ಪಕ್ಕದ್ಮನೆ ಶೆಟ್ರಂಗಡಿಲಿ ತಗಂಡಿರೊ ದಿನಸಿ ಲೆಕ್ಕಾನೇ ಗೊತ್ತಿರಲ್ಲ ಎರಡ್ ಕೋಟಿ ಉದ್ಯೋಗ ಎಲ್ಲಿ ಅಂತ ಕೇಳ್ತಾರೆ…
ಇನ್ನು ತೆರಿಗೆ ಹಂಚಿಕೆ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಯಾವ ರೀತಿ ತೆರಿಗೆ ಹಂಚಿಕೆ ಆಗ್ತಾ ಇತ್ತು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತೆರಿಗೆ ಹಂಚಿಕೆ ಯಾವ್ ರೀತಿ ಆಗ್ತಾ ಇದೆ, ಕಾಂಗ್ರೆಸ್ ಇದ್ದಾಗ ಎಷ್ಟು ಕೋಟಿ ರೂಪಾಯಿ ತೆರಿಗೆ ವಾಪಾಸ್ ಆಗಿದೆ ಬಿಜೆಪಿ ಇದ್ದಾಗ ಎಷ್ಟು ಕೋಟಿ ರುಪಾಯಿ ತೆರಿಗೆ ಹಂಚಿಕೆ ಆಗಿದೆ ಲೀಸ್ಟ್ ತೆಗ್ದು ಹೌದಪ್ಪ ಬಿಜೆಪಿಗಿಂತ ಕಾಂಗ್ರೆಸ್ ಉತ್ತಮ ಅಂತ ದಾಖಲೆ ಸಮೇತ ತೋರ್ಸಿದ್ರೆ ಇವರ ವಾದ ಸರಿ ಅನ್ಬೋದು, ಆದ್ರೆ ಅದನ್ ಬಿಟ್ಟು ತೆರಿಗೆ ಹಂಚಿಕೆಯಲ್ಲಿ ಮೋಸ ಅಂತ ಹೇಳಿದ್ರೆ ಹೇಗೆ ನಂಬೋದು, ನಂಗ್ ಗೊತ್ತಿರೊ ಹಾಗೆ ತೆರಿಗೆ ಹಂಚಿಕೆ ಸಾಂವಿಧಾನಿಕವಾಗಿ ಆಗುತ್ತೆ ಅದು ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಅದಕ್ಕೆ ಅದರದ್ದೇ ಆದಂತಹ ಕಾನೂನುಗಳು ಇದ್ದಾವೆ, ಅದನ್ನ ಮೀರಿ ಬಿಜೆಪಿ ತಪ್ಪು ಮಾಡಿದ್ರೆ ಅದನ್ನು ಸಾಬೀತು ಪಡಿಸಿ ಜನರಿಗೆ ದಾಖಲೆ ಸಮೇತ ಸತ್ಯ ಹೇಳ್ಬೇಕು…
ಅದೇ ಹಳೇ ಸೂಲಿಬೆಲೆಯವರ ವೀಡಿಯೊ ಹಾಕ್ಕಂಡ್ ಕೊರಿಯೋದಲ್ಲ, ಬುಲೆಟ್ ಟ್ರೈನ್ ಯೋಜನೆ ಶುರುವಾಗಿ ತುಂಬಾ ದಿನಗಳೇ ಕಳೆದಿವೆ, ದೇಶದಲ್ಲಿ ಕಾನೂನು ಅಂತ ಒಂದು ಇದೆ, ಭೂ ಸ್ವಾಧೀನ ಪ್ರಕ್ರಿಯೆ ಅಷ್ಟು ಸುಲಭವಲ್ಲ, ಇನ್ನು ಬುಲೆಟ್ ಟ್ರೈನ್ ತಿರುವುಗಳಲ್ಲಿ ಅಷ್ಟು ವೇಗವಾಗಿ ಹೋಗೋದಿಕ್ಕೆ ಆಗೋದಿಲ್ಲ, ಅದಕ್ಕೆ ಆದಂತಹ ಸ್ಟಾಂಡರ್ಡ್ ರೂಟ್ ಹಾಕ್ಬೇಕು, ಆ ರೂಟಲ್ಲಿ ಬರೊ ಸಮಸ್ಯೆಗಳನ್ನ ಕ್ಲಿಯರ್ ಮಾಡಿ ಯೋಜನೆ ಪೂರ್ಣಗೊಳಿಸಬೇಕು, ಆಗುತ್ತೆ ಅದೇನ್ ದೂರ ಇಲ್ಲ..
ಇನ್ನೇನು ಬೆಲೆ ಏರಿಕೆ, ಸರಿ ಬೆಲೆ ಏರಿಕೆ ಅಂತ ಬಡ್ಕೋತಿದ್ದ ಕಾಂಗ್ರೆಸ್ ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ಯಲ್ಲ, ಯಾವ್ಯಾವ ಕಡೆ ಬೆಲೆ ಏರಿಕೆ ಆಗಿತ್ತೊ ಅದನ್ನೆಲ್ಲ ವಾಪಾಸ್ ಹಳೇ ಬೆಲೆಗೆ ಮಾರಾಟ ಮಾಡುವಂತೆ ಆದೇಶ ಹೊರಡಿಸಬಹುದಲ್ಲ ? ಅದನ್ ಬಿಟ್ ಅವ್ರೇ ಮತ್ತೆ ಬೆಲೆ ಏರಿಕೆ ಮಾಡ್ಕಂಡ್ ಕೂತು ಇದು ಹಿಂದಿನ ಸರ್ಕಾರ ಮಾಡಿ ಹೋಗಿದ್ದು ಅಂತ ಕಥೆ ಹೊಡಿತಿದಾರೆ, ಹಳೇ ಸರ್ಕಾರದ ಪಠ್ಯ ಪುಸ್ತಕ ಬದಲಾವಣೆ ಮಾಡುವಷ್ಟು ಸಮಯವಿದೆ ಬೆಲೆ ಇಳಿಕೆ ಮಾಡೋದಿಕ್ಕೆ ಆಗೋದಿಲ್ವ? ಅದೊಂದು ವಿದ್ಯಾವಂತರ ನಾಡಂತೆ ಕೇರಳ, ಬಂದ್ಬುಟ್ಟು ಕರ್ನಾಟಕದ ಗಡಿಗಳಲ್ಲಿ ಪೆಟ್ರೋಲ್ ಡೀಸೆಲ್ ಹಾಕುಸ್ಕಂಡ್ ಹೋಗುತ್ವೆ, ಅಲ್ಲಿಗೆ ಅರ್ಥ ಏನು ಬೆಲೆ ಏರಿಕೆ ಅನ್ನೋದು ಯಾವುದೇ ಸರ್ಕಾರ ಇದ್ದಾಗ ಸಹಜ, ಆದ್ರೆ ಯಾವ ಪಕ್ಷ ಜನರ ತೆರಿಗೆ ಹಣವನ್ನ ದುರುಪಯೋಗ ಪಡಿಸಿಕೊಳ್ಳೋದಿಲ್ವೊ ಅಂತಹ ಪಕ್ಷಕ್ಕೆ ಬೆಂಬಲ ಕೊಡೋದು ಉತ್ತಮ…
ಗೊತ್ತಿದೆ ಇನ್ನು ನಯಾಗರಾ ಫಾಲ್ಸ್ ಫೋಟೋ ಹಾಕಿ ಎಡಿಟ್ ಮಾಡಿ ಮೋದಿ ಅವಧಿಯಲ್ಲಿ ಅಭಿವೃದ್ಧಿಗೊಂಡ ಜೋಗ್ ಫಾಲ್ಸ್ ಅಂತ ಕ್ಯಾಪ್ಶನ್ ಹಾಕೊ ಮೂರ್ಖರು ಇದಾರೆ ಅಂತ, ಆದ್ರೆ ಅದೇ ಪೋಸ್ಟ್ಗಳ ಸ್ಕ್ರೀನ್ ಶಾಟ್ಸ್ ಹಾಕ್ಕಂಡು ಮೋದಿ ಅಭಿಮಾನಿಗಳೆಲ್ಲ ಇದೇ ಥರದವರು ಅಂತ ವ್ಯಂಗ್ಯ ಮಾಡಿದ್ರೆ ಅವರಂತ ಮೂರ್ಖರು ಮತ್ತೊಬ್ರಿಲ್ಲ, ಅಂದಂಗೆ ಇವ್ರೆಲ್ಲಾ ಯಾವ ಪಕ್ಷಕ್ಕೂ ಸೇರಿಲ್ಲ ಅಂತ ಹೇಳ್ಕಂಡ್ ಮೋದಿಯನ್ನ ಮಾತ್ರ ವಿರೋಧಿಸೊ ಕೆಪ್ರುಮಕ್ದವು ಅಂತ ಬಿಡಿಸಿ ಹೇಳಬೇಕಾಗಿಲ್ಲ…
ಅಷ್ಟು ಜನ ವಿರೋಧಿಗಳು ಒಂದು ಕಡೆ, ಒಬ್ಬ ನರೇಂದ್ರ ಮೋದಿ ಮತ್ತೊಂದು ಕಡೆ, ಅವರೆಲ್ಲರಿಗೂ ಆತನನ್ನ ಸೋಲಿಸೊ ಚಿಂತೆ, ಈತನಿಗೆ ಮಾತ್ರ ಭಾರತದ ಭವಿಷ್ಯದ ಬಗ್ಗೆ ಯೋಚನೆ, ಅವರಿಗೆ ಮೋದಿ ಸೋಲ್ಬೇಕು ಅನ್ನೊ ಒಂದೇ ಗುರಿಯಿದ್ದರೂ ಅಧಿಕಾರದ ವಿಚಾರದಲ್ಲಿ ನೂರಾರು ಗೊಂದಲಗಳು ಇದಾವೆ, ಆದ್ರೆ ಮೋದಿಗೆ ಯಾವುದೇ ಗೊಂದಲಗಳಿಲ್ಲ, ಗೆದ್ದರೆ ದೇಶಕ್ಕೆ ಮತ್ತಷ್ಟು ಸೇವೆ ಅಷ್ಟೇ, ವಿರೋಧಿ ಪಾಳಯದಲ್ಲಿ ಹುಡುಕಿದರೂ ಒಬ್ಬನೇ ಒಬ್ಬ ಪ್ರಾಮಾಣಿಕ ನಾಯಕ ಇಲ್ಲ, ಆದ್ರೆ ಮೋದಿ ಎರಡು ದಶಕಗಳ ರಾಜಕೀಯ ಜೀವನದಲ್ಲಿ ಪ್ರಾಮಾಣಿಕತೆಗೆ ಚ್ಯುತಿ ಬಾರದಂತೆ ಅಧಿಕಾರ ನಡೆಸಿದ ನಾಯಕ…
ಆಯಾ ರಾಜ್ಯಗಳ ಫಲಿತಾಂಶದ ಮೇಲೆ ಮೋದಿ ಮೇಲೆ ಜನ ನಂಬಿಕೆ ಕಳ್ಕೊಂಡಿದ್ದಾರೆ ಅಂತ ಅನ್ಕೊಂಡ್ರೆ ಅದು ವಿರೋಧಿ ಪಕ್ಷಗಳ ಮೂರ್ಖತನ ಅಷ್ಟೇ, ಜಾತಿ ಧರ್ಮ ಹಣ ಅಂತಸ್ತು ಎಲ್ಲವನ್ನೂ ಮೀರಿ ಆತನ ನಿಷ್ಠೆಗೆ, ಪ್ರಾಮಾಣಿಕತೆಗೆ, ಆತನ ದೇಶಭಕ್ತಿಗೆ ಮನಸೋತ ಕೋಟ್ಯಾಂತರ ಜನರು ಆತನ ಬೆಂಬಲಕ್ಕೆ ನಿಂತಿದ್ದಾರೆ, ಬಹುಷಃ ಈ ಥರಹದ ನಿಸ್ವಾರ್ಥ ಬೆಂಬಲ ಪಡೆದ ಒಬ್ಬ ನಾಯಕನೂ ಆ 26 ಪಕ್ಷಗಳಲ್ಲಿ ಇಲ್ಲ, ಅಲ್ಲಿಗೆ ಮೋದಿಯನ್ನ ಸೋಲಿಸುವುದು ಅಷ್ಟು ಸುಲಭವಂತೂ ಅಲ್ಲ, ಬಿಜೆಪಿ ಹೊರತುಪಡಿಸಿ ಅವರವರ ರಾಜ್ಯದಲ್ಲಿ ತಮ್ಮ ಮೆಚ್ಚಿನ ಪಕ್ಷ ಇರಲಿ ಆದ್ರೆ ಕೇಂದ್ರಕ್ಕೆ ಮೋದಿಯೇ ಬರಲಿ ಅನ್ನೊರ ಸಂಖ್ಯೆ ಕಡಿಮೆ ಏನಿಲ್ಲ, 26 ಪಕ್ಷಗಳಲ್ಲ 260 ಪಕ್ಷಗಳು ಸೇರಿದ್ರೂ ಆತನನ್ನ ಸೋಲಿಸೋದು ತುಂಬಾ ದೂರದ ಮಾತು, ಮೋದಿಯಿಂದ ಎಲ್ಲವೂ ಸಾಧ್ಯ ಆಗುತ್ತೊ ಇಲ್ವೊ ಆದ್ರೆ ಆ ಇಪ್ಪತ್ತಾರು ಪಕ್ಷಗಳಿಗಿಂತ ಹೆಚ್ಚು ಕೆಲಸ ಮೋದಿ ಮಾಡ್ತಾರೆ, ಮೋದಿಯೇ ಸರ್ವೋತ್ತಮ ಅಂತ ಹೇಳ್ತಿಲ್ಲ ಆದ್ರೆ ಅವರೆಲ್ಲರಿಗಿಂತ ಉತ್ತಮ ಅಂತೂ ಹೌದು…
ಮೋದಿ ಮಗದೊಮ್ಮೆ ಅಷ್ಟೇ