ಸಮಾಜದ ಮಧ್ಯೆ ಇದ್ದು , ಸ್ವಂತಕ್ಕೆ 5 ರೂಪಾಯಿ ಕೂಡಿಡದ ಸನ್ಯಾಸಿ ಬಗ್ಗೆ ಯಾಕ್ರೋ ಇಷ್ಟು ದ್ವೇಷ ???  

ಸಮಾಜದ ಮಧ್ಯೆ ಇದ್ದು , ಸ್ವಂತಕ್ಕೆ 5 ರೂಪಾಯಿ ಕೂಡಿಡದ ಸನ್ಯಾಸಿ ಬಗ್ಗೆ ಯಾಕ್ರೋ ಇಷ್ಟು ದ್ವೇಷ ???  

 

ಸಂತೋಷ್ ಜೀ !! 

ರಾಷ್ಟ್ರವಾದಿ ಸಂಸ್ಥೆ ಎಂದು ಹೆಸರು ಮಾಡಿದ್ದ ದಿಗ್ವಿಜಯ ವಾಹಿನಿಗೆ ನಮ್ಮ ಹುಡುಗ್ರೆಲ್ಲಾ ರಾಜೀನಾಮೆ ಯಾಕೆ ಕೊಟ್ರು ಅಂತ ಅರ್ಥ ಆಗಿರಲಿಲ್ಲ  ಆದ್ರೆ ಈಗ ಎಲ್ಲಾ ಅರ್ಥ ಆಗ್ತಾ ಇದೆ

ಕಮ್ಯುನಿಸ್ಟ್ ಕಾಮ್ರೇಡ್‌ಗಳಾಗಿರುವ ಇಬ್ಬರು ಕೆಲಸ ಗಿಟ್ಟಿಸಿಕೊಂಡ ನಂತರ ಅಲ್ಲಿನ ಚಿತ್ರಣವೇ ಬದಲಾಗಿದೆ

 

ಇತ್ತೀಚೆಗೆ “ನಿರಂತರವಾಗಿ ಬಿ.ಎಸ್.ವೈ ವಿರುದ್ಧ ಬಿ.ಎಲ್ ಸಂತೋಷ್ ಕುತಂತ್ರ” ಅಂತ ಹೆಸರು ಕೊಟ್ಟು “ಸಂತೋಷ್ ಅವರು ಲಿಂಗಾಯತ ವಿರೋಧಿ” ಎಂಬ ಚಿತ್ರಣ ಬರುವ ಹಾಗೆ ಕಾರ್ಯಕ್ರಮ ಮಾಡಿದ್ರು !!

ಹಾಗೇ ನೋಡ್ತಾ ಹೋದ್ರೆ ಆ ಚಾನೆಲ್ ಅವರ ಬಹಳಷ್ಟು ವೀಡಿಯೋಗಳಲ್ಲಿ, ಅವರಿಗೆ ಸಂತೋಷ್ ಜೀ ಮೇಲೆ ಇರೋ ದ್ವೇಷ ಎದ್ದು ಕಾಣಿಸುತ್ತೆ

ಸಂತೋಷ್ ಜೀ RSS ಪ್ರಚಾರಕರು. ನನಗೆ ಸಂಘದ ಕೆಲವರ ಪರಿಚಯ ಇದೆಯಾದ್ರೂ ಸಂಘದ ಕಾರ್ಯಕರ್ತೆಯಲ್ಲ  ಬಿಜೆಪಿ ಸದಸ್ಯೆ ಅಂತೂ ಮೊದಲೇ ಅಲ್ಲ

 

ಕರ್ನಾಟಕ & ದೇಶದ ಜನರಲ್ಲಿ ಕುತೂಹಲ ಹಾಗೂ ಗೌರವ ಹುಟ್ಟಿಸಿರುವ ಈ ವ್ಯಕ್ತಿ ಬಗ್ಗೆ ನನಗೇನೋ ಒಂತರಾ ಕುತೂಹಲ. ಹಾಗಾಗಿ ಕೆಲವು ಸ್ನೇಹಿತರ ಹತ್ತಿರ , ತಮ್ಮಂದಿರ ಹತ್ತಿರ ಸಂತೋಷ್ ಜೀ ಅವರ ಬಗ್ಗೆ ಒಂದಿಷ್ಟು ವಿಷಯಗಳನ್ನು ಕೇಳಿ ತಿಳಿದುಕೊಂಡೆ.

ಅವರ ಮೇಲೆ ಅಷ್ಟೆಲ್ಲಾ ಆರೋಪಗಳಿದ್ರೂ, ಬಿಜೆಪಿಯನ್ನು ಬಲಿಷ್ಠವಾಗಿ ಕಟ್ಟುವುದೊಂದೇ ನನ್ನ ಗುರಿ ಎಂದು ಹಗಲಿರುಳು ಸಂಘಟನೆಯ ಕೆಲಸ ಮಾಡ್ತಾ ಇದ್ದಾರೆ.

 

ಸಂತೋಷ್ ಜೀ ಯಾವ ಚಾನಲ್’ಗೂ ಮಾತಾಡಿದ್ದು ನಾನು ನೋಡಿಲ್ಲ.ಸಾರ್ವಜನಿಕವಾಗಿ ಯಾವ ಪ್ರತಿಕ್ರಿಯೆ ಕೂಡ ಕೊಟ್ಟಿಲ್ಲ. ಅವರ ಬಗ್ಗೆ ಯಾರಾದರೂ ಸುಳ್ಳು ಆರೋಪಗಳನ್ನು ಮಾಡಿದ್ರೆ, ಅದನ್ನು ಅಲ್ಲಗಳೆಯುವ ಗೋಜಿಗೂ ಹೋಗಲ್ಲ … !!!

ಮೊನ್ನೆ ಯಾವುದೋ ಒಂದು ಅವರದ್ದೇ ವೀಡಿಯೋ ನೋಡ್ದೆ. ಬಿಜೆಪಿಯವರು ಯಾರೂ ಯಾವ ಕಾರಣಕ್ಕೂ ಕೆಟ್ಟ ಪದಗಳನ್ನು ಬಳಸಬೇಡಿ ಅಂತ ಭಾಷಣದಲ್ಲಿ ಹೇಳ್ತಾ ಇದ್ರು‌.‌ ಹಾಗಾಗಿ ಯಾಕ್ರೋ “ಸಂತೋಷ್ ಜೀ ವಿರುದ್ಧ ಸುಳ್ಳು ಆರೋಪ ಮಾಡಿದ್ರಿ” ಅಂತ ಅವರ ಪರವಾಗಿ ನಿಂತು ಗಲಾಟೆ ಮಾಡೋರು ಕೂಡ ಯಾರೂ ಇಲ್ಲ ..

 

ನನಗೆ ಸಂತೋಷ್ ಜೀ ಅಷ್ಟೊಂದು ಪರಿಚಯ ಇಲ್ಲ. ನನ್ನ ಕೇಸ್ ಆದಾಗ ನನ್ನನ್ನು ಬೆಂಬಲಿಸಿ ಟ್ವೀಟ್ ಮಾಡಿದ್ರು ಅದಾದ ಮೇಲೆ ಮೋದಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋದಾಗ ಯಾರೋ ಮಂತ್ರಿಗಳ ಮನೆಯಲ್ಲಿ ಇವರನ್ನು ಮತ್ತೆ ಭೇಟಿಯಾಗಿದ್ದೆ , ಫೋಟೋ ಕೂಡ ತಗೊಂಡಿದ್ವಿ. ಅಲ್ಲಿದ್ದ ಒಬ್ಬ ಕಾರ್ಯಕರ್ತನಿಗೆ ಸಂತೋಷ್ ಜೀ ಮಂತ್ರಿಗಳಿಗಿಂತನೂ ಫುಲ್ ಟಿಪ್ ಟಾಪ್ ಆಗಿದ್ದಾರೆ ಅಂತ ಹೇಳಿದ್ದಕ್ಕೆ ಆ ಹುಡುಗ “ಸಂತೋಷ್ ಜೀ ಸದಾ ಇಸ್ತ್ರಿ ಮಾಡಿದ ಬಟ್ಟೆ ತೊಡುವ ಆದರೆ ಒಳಗೆ ಹರಿದ ಬನಿಯಾನು ಹಾಕಿದ ಸಂತ” ಕಣಕ್ಕಾ ಅಂದಿದ್ದ

ಸಂತೋಷ್‌ಜೀ ಮೇಲೆ ಮಾಡಿರೋ ಅಷ್ಟೊಂದು ಆರೋಪಗಳಲ್ಲಿ ಸತ್ಯ ಇದೆನಾ ಅಂತ ಪ್ರಶ್ನೆ ಮಾಡೋ ಸಮಯ ಇದು !!

 

ನನಗ್ಯಾರಾದ್ರೂ ಏನಾದ್ರೂ ಹೇಳಿದ್ರೆ ಕ್ಷಮೆ‌ ಕೇಳಿಸೋವರೆಗೂ ನಾನು ಬಿಡಲ್ಲ. ಆದರೆ “ಬ್ರಾಹ್ಮಣ ಪಕ್ಷಪಾತಿ”, ” ಲಿಂಗಾಯತ ವಿರೋಧಿ” ಹೀಗೆ ಎಷ್ಟೆಲ್ಲಾ ಟೀಕೆಗಳನ್ನು ಕೇಳಿ ಕೂಡ, ಇಷ್ಟೊಂದು ಅವಮಾನಗಳಾದ್ರೂ ಸಂತೋಷ್ ಜೀ ಹೇಗೆ ಇಷ್ಟು ಸಂತೋಷದಿಂದ ಇರೋಕೆ ಸಾಧ್ಯ ಅಂತ ನನಗೆ ಅನ್ನಿಸ್ತಾನೆ ಇದೆ

*****ಸಂತೋಷ್ ಜೀ ನಿಜವಾಗಲೂ ಲಿಂಗಾಯಿತ ವಿರೋಧಿನಾ ????******

 

1) ಸೋತು ಸುಣ್ಣ ಆಗಿದ್ದ ಲಿಂಗಾಯಿತರ ಲಕ್ಷ್ಮಣ ಸವದಿಗೆ ಉಪಮುಖ್ಯಂತ್ರಿ ಮಾಡಿದಾಗ “ಸಂತೋಷ್ ಜೀ ಲಿಂಗಾಯತರ ವಿರೋಧಿ” ಅಂತ ಯಾರಿಗೂ ಅನ್ನಿಸಲೇ ಇಲ್ಲ

2) ಲಿಂಗಾಯಿತರ ಹುಡುಗ ಮಲ್ಲಿಕಾರ್ಜುನ ಬಾಳೀಕಾಯಿನ ಯುವಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡ್ದಾಗ ಕೂಡ “ಸಂತೋಷ್ ಜೀ ಲಿಂಗಾಯಿತರ ವಿರೋಧಿ” ಅಂತ ಅನ್ನಿಸಲೇ ಇಲ್ಲ

3) ಆದರೆ 30 ವರ್ಷದಿಂದ ಅಧಿಕಾರದ ಸಿಹಿಯುಂಡು, ನಮ್ಮಪ್ಪಂದೇ ಆಸ್ತಿ ಅಂತ ರಾಜ್ಯಭಾರ ಮಾಡ್ತಾ ಇದ್ದ

ಶೆಟ್ಟರ್ ಅವರಿಗೆ “ಹೊಸಬರಿಗೆ ಅವಕಾಶ ಕೊಡಿ” ಎಂದಾಗ ಸಂತೋಷ್ ಜೀ ಲಿಂಗಾಯತರ ವಿರೋಧಿ ಆಗ್ತಾರೆ ಅಂದ್ರೆ ಜನರ‌ ಮನಸ್ಥಿತಿ ಏನು , ಈ ಮಾಧ್ಯಮದವರ ಯೋಗ್ಯತೆ ಏನು ಅಂತ ಹೊರಗೆ ಬರ್ತಾ ಇದೆ !!

ಹೆತ್ತ ತಾಯಿ ಹಾಗೆ ಸಲಹಿದ ಪಕ್ಷಕ್ಕೆ ಮೋಸ ಮಾಡಿರೋ ಜಗದೀಶ್ ಶೆಟ್ಟರ್ ಅದ್ಯಾವ ಮುಖ ಇಟ್ಕೊಂಡು ಸಂತೋಷ್ ಜೀ ಬಗ್ಗೆ ಮಾತಾಡ್ತಾರೋ ಗೊತ್ತಿಲ್ಲ .. ಥೂ ಅಸಹ್ಯ

4) ಶೆಟ್ಟರ್ ಜಾಗಕ್ಕೆ ಬಂದಿರೋ ಮಹೇಶ್ ತೆಂಗಿನಕಾಯಿ ಕೂಡ ಲಿಂಗಾಯಿತರೇ ಕಣ್ರಪ್ಪಾ !!!!

ಉತ್ತರ ಕೊಡೋಕು ತಾಕತ್ತು ಬೇಕು

 

******ಸಂತೋಷ್ ಜೀ ಬ್ರಾಹ್ಮಣರ ಪಕ್ಷಪಾತಿನಾ ?? *****

 

1) ಉಡುಪಿಯ ಬ್ರಾಹ್ಮಣ ಶಾಸಕ‌ ರಘುಪತಿ ಭಟ್ಟರನ್ನು ತೆಗೆದು ಮೊಗವೀರರ ಯಶಪಾಲ್ ಸುವರ್ಣ ಅವರಿಗೆ ಟಿಕೆಟ್ ನೀಡಿರೋ ಸಂತೋಷ್ ಜೀ ಬ್ರಾಹ್ಮಣ ಪಕ್ಷಪಾತಿ ಅಂತ ಯಾರಿಗೂ ಅನ್ನಿಸಲೇ ಇಲ್ಲ!

2) ಯುವಮೋರ್ಚಾ ಗೆ ದಲಿತರ ಬಲಗೈ ಡಾ.ಸಂದೀಪ್ ಕುಮಾರ್‌‌ ನ ರಾಜ್ಯಾಧ್ಯಕ್ಷರನ್ನಾಗಿ ಮಾಡಿರೋ ಸಂತೋಷ್ ಜೀ ಬ್ರಾಹ್ಮಣ ಪಕ್ಷಪಾತಿ ಅಂತ ಯಾರಿಗೂ ಅನ್ನಿಸಲೇ ಇಲ್ಲ!

3) ಇನ್ನು ಒಕ್ಕಲಿಗ ಡಾ.ಅಶ್ವಥ್ ನಾರಾಯಣ್ & ದಲಿತರ ಗೋವಿಂದ ಕಾರಜೋಳ ಅವರನ್ನು ಡಿಸಿಎಂ ಮಾಡಿದಾಗಲೂ ಸಂತೋಷ್ ಜೀ ಬ್ರಾಹ್ಮಣ ಪಕ್ಷಪಾತಿ ಅಂತ ಯಾರಿಗೂ ಅನ್ನಿಸಲೇ ಇಲ್ಲ!!!!

ಹುಡುಕ್ತಾ ಹೋದ್ರೆ ಲೀಸ್ಟ್ ಬಹಳಷ್ಟಿದೆ

ಒಕ್ಕಲಿಗರ ಜ್ಞಾನೇಂದ್ರ, ದಲಿತರ ಅಂಗಾರರನ್ನು, ಬಿಲ್ಲವರ ಸುನೀಲ್‌ರನ್ನು ಮಂತ್ರಿ ಮಾಡಿದಾಗ ಕೂಡ ಸಂತೋಷ್ ಜೀ ಬ್ರಾಹ್ಮಣ ಪಕ್ಷಪಾತಿ ಅಂತ ಯಾರು ಯಾರಿಗೂ ಅನ್ನಿಸಲೇ ಇಲ್ಲ!!!

ಬೇರೆ ಎಲ್ಲಾ ಬಿಡಿ , 2013ರಲ್ಲಿ ಕೆಜಿಪಿಗೆ ಸೇರಿ ಸಂತೋಷ್‌ಜೀ ಅವರನ್ನು ಬಾಯಿಗೆ ಬಂದ ಹಾಗೆ ಬೈದಿದ್ದ ಶೋಭಾ ಕರಂದ್ಲಾಜೆ ಅವರು ಮತ್ತೆ ಬಿಜೆಪಿಗೆ ಬಂದಾಗ ಸಂಸದರಾಗಲು ಅವಕಾಶ ಕೊಟ್ಟು , ಮುಂದೆ ಕೇಂದ್ರ ಮಂತ್ರಿಯಾಗಲು ಬೆಂಬಲಿಸಿದ ಸಂತೋಷ್ ಜೀ ಬ್ರಾಹ್ಮಣ ಪಕ್ಷಪಾತಿ ಅಂತ ಯಾರಿಗೂ ಅನ್ನಿಸಲೇ ಇಲ್ಲ

ಸಂತೋಷ್ ಜೀ ಸಹಕಾರದಿಂದ ಮುಂದೆ ಬಂದಿರೋ ಬ್ರಾಹ್ಮಣರಿಗಿಂತ , ಬ್ರಾಹ್ಮಣೇತರರ ಪಟ್ಟಿನೇ ಬಹಳ ದೊಡ್ಡದಿದೆ

ಇಷ್ಟಾದ್ರೂ “ಬ್ರಾಹ್ಮಣ ಪಕ್ಷಪಾತಿ” ಅಂತ ಸುಳ್ಳು ಆರೋಪ ಮಾಡಿ &#ಬೊಗಳೋ*-+& ನಾಯಿಗಳಿಗೆ ಅವರೆಂದೂ ಪ್ರತಿಕ್ರಿಯೆ ಕೊಟ್ಟಿಲ್ಲ ಬಹುಶಃ ಕೊಡೋದೂ ಇಲ್ಲ ಅನ್ಸುತ್ತೆ

ಸಂತೋಷ್ ಜೀ ರಾಷ್ಟ್ರನಿರ್ಮಾಣಕ್ಕಾಗಿ ಮನೆಯನ್ನೇ ಬಿಟ್ಟು ಸಮಾಜವನ್ನೇ ಮನೆಯನ್ನಾಗಿಸಿಕೊಂಡಿರುವವರು

ಏನ್ ಪಿತ್ರಾರ್ಜಿತ ಆಸ್ತಿ ಅನ್ನೋ ಹಾಗೆ “ನನ್ನ ಹೆಂಡತಿಗೆ ಟಿಕೆಟ್ ಕೊಡಿ,‌ಮಗನಿಗೆ ಟಿಕೆಟ್ ಕೊಡಿ” ಅಂತ ಬೇಡುವವರು ಒಂದು ಕಡೆಯಾದ್ರೆ , ಸಮಾಜದ ಉನ್ನತಿಗಾಗಿ, ಪಕ್ಷ ಸಂಘಟನೆಗಾಗಿ ರಾಜಕೀಯದಲ್ಲಿ ಯುವಕರು ಬರಬೇಕು ಎಂದು ಹಂಬಲಿಸುತ್ತಿರುವ ಸಂತೋಷ್ ಜೀ ಇನ್ನೊಂದು ಕಡೆ

“ಅಣ್ಣ, ಸಾಹೇಬ, ಅಪ್ಪಾಜಿ, ಅಕ್ಕ” ಎಂದೆಲ್ಲ ಕರೆಸಿಕೊಂಡು ಬೀಗುವ ರಾಜಕೀಯ ಪುಢಾರಿಗಳಿಗೆ ಸಂತೋಷ್‌ಜಿ ಅವರ ನಿಸ್ಪೃಹತೆ, ದೂರದರ್ಶಿತ್ವ ಖಂಡಿತಾ ಅರ್ಥ ಆಗಿಲ್ಲ, ಆಗೋದು ಇಲ್ಲ.. !!!

ಸಂತೋಷ್ ಜೀ,

ನಿಮ್ಮ ಮಾರ್ಗದರ್ಶನದಲ್ಲಿ ಆಗ್ತಾ ಇರೋ ಈ ಬದಲಾವಣೆಗಳನ್ನು ನನ್ನಂತ ಅದೆಷ್ಟೋ ಯುವಕರು / ಯುವತಿಯರು ಮನಸ್ಸಿನಿಂದ ಒಪ್ಕೊಂಡಿದ್ದಾರೆ. ನಿಮ್ಮ ಜೊತೆ ನಾವು ಯಾವಾಗಲೂ ಇದ್ದೀವಿ , ಇರ್ತೀವಿ ಕೂಡ

ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಅಂತ ಕಾವಿ ತೊಡದೇ ಸನ್ಯಾಸಿಯಾಗಿ ಬದುಕುತ್ತಿರುವ ನಿಮಗೆ ಆ ಶಾರದಾ ಮಾತೆ ಮತ್ತಷ್ಟು ಶಕ್ತಿ ಕೊಡಲಿ ಅಂತ ಪ್ರಾರ್ಥನೆ ಮಾಡ್ಕೊಂತೀನಿ..

Leave a Reply

Your email address will not be published. Required fields are marked *