ಬೆಂಗಳೂರು : ಮಾಡಾಳ್ ಪುತ್ರನ 40 ಲಕ್ಷ ಲಂಚ ಪ್ರಕರಣದಲ್ಲಿ ನಿಗಮ ಸ್ಥಾನ ಕಳೆದುಕೊಂಡ MLAಗೆ ಮತ್ತೊಂದು ಶಾಕ್ ಆಗಲಿದ್ದು, ಬಿಜೆಪಿ ಪಕ್ಷದಿಂದಲೇ ಕಿಕ್ಔಟ್ ಮಾಡಲು ಚಿಂತನೆ ನಡೆಸಿದ್ಧಾರೆ.
ಬಿಜೆಪಿ ಪಕ್ಷದಿಂದ ಮಾಡಾಳ್ ವಿರೂಪಾಕ್ಷಪ್ಪ ಉಚ್ಛಾಟನೆ ಸಾಧ್ಯತೆಯಿದೆ. ಉಚ್ಛಾಟನೆ ಸಂಬಂಧ ಬಿಜೆಪಿ ಪಕ್ಷದಲ್ಲಿ ನಡೆಯುತ್ತಿದೆ ಆಂತರಿಕ ಚರ್ಚೆ ನಡೆಯುತ್ತಿದೆ. ರಾಜ್ಯ ಘಟಕದಿಂದ ಇಂದೇ ಕೇಂದ್ರಕ್ಕೆ ವರದಿ ರವಾನೆಯಾಗಿದೆ. ಬಿಜೆಪಿ ಶಿಸ್ತು ಸಮಿತಿಗೆ ಪ್ರಕರಣ ಸಂಬಂಧ ವರದಿ ರವಾನೆ, ವರದಿಯಲ್ಲಿ ಉಚ್ಛಾಟನೆಗೂ ಶಿಫಾರಸು ಮಾಡುವ ಸಾಧ್ಯತೆಗಳಿದೆ. ಚುನಾವಣೆ ಹೊತ್ತಲ್ಲಿ ಮುಜುಗರ ತಪ್ಪಿಸಿಕೊಳ್ಳಲು ಉಚ್ಛಾಟನೆ..? ಮಾಡಾಳ್ ಪುತ್ರನ ಭ್ರಷ್ಟಕಾಂಡಕ್ಕೆ ವರಿಷ್ಠರು ಕೆಂಡಾಮಂಡಲರಾಗಿದ್ದಾರೆ.